ADVERTISEMENT

ಇಸ್ರೇಲ್‌: ನೇತನ್ಯಾಹು ಪದಚ್ಯುತಿ– ನಫ್ತಾಲಿ ನೂತನ ಪ್ರಧಾನಿ

ಪಿಟಿಐ
Published 13 ಜೂನ್ 2021, 19:39 IST
Last Updated 13 ಜೂನ್ 2021, 19:39 IST
ಇಸ್ರೇಲ್‌ ಸಂಸತ್‌ ಭಾನುವಾರ ಅನುಮೋದನೆ ನಂತರ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬೆಂಜಮಿನ್‌ ನೇತನ್ಯಾಹು ಹಾಗೂ ನೂತನ ಪ್ರಧಾನಿ ನಫ್ತಾಲಿ ಬೆನೆಟ್‌ ಹಸ್ತಲಾಘವ ಮಾಡಿದರು –ರಾಯಿಟರ್ಸ್‌ ಚಿತ್ರ
ಇಸ್ರೇಲ್‌ ಸಂಸತ್‌ ಭಾನುವಾರ ಅನುಮೋದನೆ ನಂತರ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬೆಂಜಮಿನ್‌ ನೇತನ್ಯಾಹು ಹಾಗೂ ನೂತನ ಪ್ರಧಾನಿ ನಫ್ತಾಲಿ ಬೆನೆಟ್‌ ಹಸ್ತಲಾಘವ ಮಾಡಿದರು –ರಾಯಿಟರ್ಸ್‌ ಚಿತ್ರ   

ಜೆರುಸಲೇಮ್‌: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರನ್ನು ಭಾನುವಾರ ಪದಚ್ಯುತಗೊಳಿಸಲಾಗಿದ್ದು, ನಫ್ತಾಲಿ ಬೆನೆಟ್‌ ಅವರು ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ನೇತನ್ಯಾಹು ಬೆಂಬಲಿಗರ ಗದ್ದಲದ ನಡುವಯೇ, ಅವರ ಪದಚ್ಯುತಿಗೆ 120 ಸದಸ್ಯ ಬಲದ ಇಸ್ರೇಲ್‌ ಸಂಸತ್‌ ಅನುಮೋದನೆ ನೀಡಿತು. ಇದರೊಂದಿಗೆ ಕಳೆದ 12 ವರ್ಷಗಳಿಂದಲೂ ಪ್ರಧಾನಿಯಾಗಿದ್ದ ನೇತನ್ಯಾಹು ಅವರ ಅಧಿಕಾರ ಕೊನೆಗೊಂಡಂತಾಗಿದೆ.

ಮಾಜಿ ರಕ್ಷಣಾ ಸಚಿವರೂ ಆಗಿರುವ 49 ವರ್ಷದ ನಫ್ತಾಲಿ ಅವರು ಬಲಪಂಥೀಯ ಪಕ್ಷ ಯಾಮಿನಿ ಪಾರ್ಟಿಯ ಮುಖಂಡ. ಅವರು ಸೈದ್ಧಾಂತಿಕವಾಗಿ ವಿಭಿನ್ನ ನಿಲುವುಗಳನ್ನು ಹೊಂದಿರುವ ಎಡಪಂಥೀಯ, ಬಲಪಂಥೀಯ, ಅರಬ್‌ ಪಕ್ಷಗಳ ಮೈತ್ರಿಕೂಟದ ನಾಯಕರಾಗಿದ್ದಾರೆ.

ADVERTISEMENT

ನೂತನ ಸರ್ಕಾರದಲ್ಲಿ 9 ಜನ ಮಹಿಳೆಯರು ಸೇರಿ 27 ಜನ ಸಚಿವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.