ADVERTISEMENT

ಚರ್ಚೆಗೆ ಸುನಕ್‌ರನ್ನು ಆಹ್ವಾನಿಸಿದ ಬೈಡನ್‌

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 13:29 IST
Last Updated 8 ಜೂನ್ 2023, 13:29 IST
ರಿಷಿ ಸುನಕ್‌
ರಿಷಿ ಸುನಕ್‌   

ವಾಷಿಂಗ್ಟನ್‌: ರಿಷಿ ಸುನಕ್‌ ಅವರು ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಶ್ವೇತಭವನಕ್ಕೆ ಭೇಟಿ ನೀಡುತ್ತಿದ್ದಾರೆ.

ಉಕ್ರೇನ್‌ ಯುದ್ಧ, ಚೀನಾ, ಆರ್ಥಿಕ ಭದ್ರತೆ, ಕೃತಕ ಬುದ್ಧಿಮತ್ತೆಯ ನಿಯಂತ್ರಣದಲ್ಲಿ ಅಂತರರಾಷ್ಟ್ರೀಯ ಸಹಕಾರ ಹಾಗೂ ಇತರೆ ವಿಷಯಗಳ ಕುರಿತು  ಉಭಯ ನಾಯಕರು ಓವಲ್‌ ಕಚೇರಿಯಲ್ಲಿ (ಅಮೆರಿಕ ಅಧ್ಯಕ್ಷರು ಔಪ‍ಚಾರಿಕವಾಗಿ ಕಾರ್ಯ ನಿರ್ವಹಿಸುವ ಸ್ಥಳ) ಚರ್ಚಿಸುವ ನಿರೀಕ್ಷೆಯಿದೆ.

ಆದರೆ, ‘ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣವು ಚರ್ಚೆಯ ಪ್ರಮುಖ ವಿಷಯವಾಗಲಿದೆ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೈನ್‌ ಜೀನ್‌ ಪಿಯರ್‌ ಹೇಳಿದ್ದಾರೆ.

ADVERTISEMENT

ಸುನಕ್‌ ಅವರು ಪ್ರಧಾನಿ ಆದಾಗಿನಿಂದ ಇಲ್ಲಿಯವರೆಗೆ ಬೈಡನ್‌– ಸುನಕ್‌ ಅವರು ನಾಲ್ಕು ಬಾರಿ ಮುಖಾಮುಖಿಯಾಗಿ ಸಭೆ ನಡೆಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.