ADVERTISEMENT

ಬೇಹುಗಾರಿಕೆ ನಡೆಸುತ್ತಿದ್ದ ಭಾರತದ ಡ್ರೋನ್‌ ನಾಶ: ಪಾಕಿಸ್ತಾನ

ಪಿಟಿಐ
Published 6 ಜೂನ್ 2020, 20:14 IST
Last Updated 6 ಜೂನ್ 2020, 20:14 IST

ಇಸ್ಲಾಮಾಬಾದ್‌: ಗಡಿ ನಿಯಂತ್ರಣಾ ರೇಖೆ (ಎಲ್‌ಒಸಿ) ದಾಟಿ ಒಳನುಗ್ಗಿದ ‘ಭಾರತದ ಬೇಹುಗಾರಿಕಾ ಕ್ವಾಡ್‌ಕಾಪ್ಟರ್‌(ಡ್ರೋನ್‌)’ ಒಂದನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ಶನಿವಾರ ತಿಳಿಸಿದೆ.

‘ಖಂಜರ್‌ ವಲಯದಲ್ಲಿ ಪಾಕಿಸ್ತಾನದ ವಾಯುಪ್ರದೇಶವನ್ನು ಉಲ್ಲಂಘಿಸಿ ಸಣ್ಣ ಗಾತ್ರದ ಕಾಪ್ಟರ್, ಎಲ್‌ಒಸಿ ದಾಟಿ 500 ಮೀ. ಒಳಗಡೆಪ್ರವೇಶಿಸಿತ್ತು’ ಎಂದು ಸೇನೆಯ ವಕ್ತಾರ ಮೇಜರ್‌ ಜನರಲ್‌ ಬಾಬರ್‌ ಇಫ್ತಿಕಾರ್‌ ತಿಳಿಸಿದರು.

8ನೇ ಕಾಪ್ಟರ್‌: ‘ಈ ವರ್ಷದಲ್ಲಿ ಭಾರತದ ಎಂಟನೇ ಕ್ವಾಡ್‌ಕಾಪ್ಟರ್‌ ಅನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ. ಮೇ 27ರಂದು ಹಾಗೂ ಮೇ 29ರಂದು ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿದ್ದ ಎರಡು ಕ್ವಾಡ್‌ಕಾಪ್ಟರ್‌ಗಳನ್ನು ಹೊಡೆದುರುಳಿಸಿದ್ದೆವು’ ಎಂದು ಇಫ್ತಿಕಾರ್‌ ಹೇಳಿದರು.

ADVERTISEMENT

ಕಳೆದ ಬಾರಿ ಪಾಕಿಸ್ತಾನದ ಈ ಆರೋಪವನ್ನು ಭಾರತ ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.