ADVERTISEMENT

ಬೈಡನ್‌ ನಿವಾಸದಲ್ಲಿ ತಪಾಸಣೆ, ದಾಖಲೆಗಳ ವಶ: ರಾಜಕೀಯ ಕಾನೂನು ದೃಷ್ಟಿಯಿಂದ ತೊಡಕು?

ಪಿಟಿಐ
Published 22 ಜನವರಿ 2023, 19:01 IST
Last Updated 22 ಜನವರಿ 2023, 19:01 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ವಿಲ್ಮಿಂಗ್ಟನ್‌ ನಿವಾಸದಲ್ಲಿ ಸತತ 13 ಗಂಟೆ ತಪಾಸಣೆ ನಡೆಸಿರುವ ಎಫ್‌ಬಿಐ ಅಧಿಕಾರಿಗಳು ಇನ್ನಷ್ಟು ವರ್ಗೀಕೃತ ದಾಖಲೆಗಳನ್ನು ವಶಕ್ಕೆಪಡೆದಿದ್ದಾರೆ.

2024ರ ಚುನಾವಣೆಯಲ್ಲಿ ಮರು ಆಯ್ಕೆಗೆ ಸಿದ್ಧತೆ ನಡೆಸಿರುವ ಜೋ ಬೈಡನ್‌ ಅವರಿಗೆ, ತನಿಖೆಯ ಈ ಬೆಳವಣಿಗೆಗಳು ರಾಜಕೀಯ ಮತ್ತು ಕಾನೂನು ದೃಷ್ಟಿಯಿಂದ ತೊಡಕಾಗುವ ಸಾಧ್ಯತೆಗಳಿವೆ.

ಈ ಕುರಿತು ಹೇಳಿಕೆ ನೀಡಿರುವ ಅಧ್ಯಕ್ಷರ ವೈಯಕ್ತಿಕ ಅಟಾರ್ನಿ ಬಾಬ್ ಬಾಯರ್ ಅವರು, ಶನಿವಾರ ತಪಾಸಣೆ ನಡೆಸಿದ ನ್ಯಾಯಾಂಗ ಇಲಾಖೆ ಅಧಿಕಾರಿಗಳು ಕೆಲ ದಾಖಲೆ, ಪರಿಕರ ವಶಪಡಿಸಿಕೊಂಡರು. ಕೆಲ ಪರಿಕರಗಳು ಬೈಡನ್‌ ಅರು ಸೆನೆಟ್‌ ಸದಸ್ಯ ಮತ್ತು ಉಪಾಧ್ಯಕ್ಷರಾಗಿದ್ದ ಅವಧಿಗೆ ಸಂಬಂಧಿಸಿದ್ದಾಗಿವೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.