ADVERTISEMENT

ಅಮೆರಿಕದ ಎನ್‌ಇಸಿ ಉಪ ನಿರ್ದೇಶಕಿಯಾಗಿ ಭಾರತ ಮೂಲದ ಸಮೀರಾ ಫಾಝಿಲಿ ನೇಮಕ

ಜೋ ಬೈಡನ್ ಆಡಳಿತ ಪ್ರಮುಖ ಹುದ್ದೆಗೆ ನೇಮಕವಾದ ಕಾಶ್ಮೀರ ಮೂಲದ ಎರಡನೇ ಅಧಿಕಾರಿ

ಪಿಟಿಐ
Published 16 ಜನವರಿ 2021, 6:42 IST
Last Updated 16 ಜನವರಿ 2021, 6:42 IST
ಸಮೀರಾ ಫಾಝಿಲಿಚಿತ್ರ: ಸಮೀರಾ ಟ್ವಿಟರ್‌ ಖಾತೆ
ಸಮೀರಾ ಫಾಝಿಲಿಚಿತ್ರ: ಸಮೀರಾ ಟ್ವಿಟರ್‌ ಖಾತೆ   

ವಾಷಿಂಗ್ಟನ್: ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು, ಭಾರತೀಯ – ಅಮೆರಿಕನ್ ಸಮೀರಾ ಫಾಝಿಲಿ ಅವರನ್ನು ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿ ನೇಮಕ ಮಾಡಿದ್ದಾರೆ.

ಫಾಝಿಲಿ ಅವರ ನೇಮಕವನ್ನು ಬೈಡನ್–ಕಮಲಾ ಹ್ಯಾರಿಸ್‌ ಅವರ ಅಧಿಕಾರ ಹಸ್ತಾಂತರ ಪ್ರಕ್ರಿಯೆಯ ತಂಡ ಶುಕ್ರವಾರ ಪ್ರಕಟಿಸಿದೆ.

ರಾಷ್ಟ್ರೀಯ ಆರ್ಥಿಕ ಮಂಡಳಿಯು ದೇಶದ ಆರ್ಥಿಕ ನೀತಿ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಸಂಯೋಜಿಸುವ ಜತೆಗೆ ಅಮೆರಿಕ ಅಧ್ಯಕ್ಷರಿಗೆ ಆರ್ಥಿಕ ನೀತಿ ಕುರಿತು ಸಲಹೆ ನೀಡುತ್ತದೆ.

ADVERTISEMENT

ಫಾಝಿಲಿ ಅವರು ಪ್ರಸ್ತುತ ಬೈಡನ್ – ಕಮಲಾ ಹ್ಯಾರಿಸ್‌ ಅವರ ಅಧಿಕಾರ ಹಸ್ತಾಂತರ ತಂಡದಲ್ಲಿ ಆರ್ಥಿಕ ತಂಡದ ಭಾಗವಾಗಿದ್ದಾರೆ. ಈ ಹಿಂದೆ ಅವರನ್ನು ಅಟ್ಲಾಂಟಾದ ಫೆಡರಲ್ ರಿಸರ್ವ್ ಬ್ಯಾಂಕ್‌ಗೆ ನೇಮಿಸಲಾಗಿತ್ತು. ಅಲ್ಲಿ ಅವರು ಸಮುದಾಯ ಮತ್ತು ಆರ್ಥಿಕ ಅಭಿವೃದ್ಧಿ ವಿಭಾಗದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಫಾಝಿಲಿ ಅವರು ಬೈಡನ್ ಆಡಳಿತದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿರುವ ಎರಡನೇ ಕಾಶ್ಮೀರ ಮೂಲದ ಭಾರತೀಯ ಅಮೆರಿಕನ್. ಕಾಶ್ಮೀರ ಮೂಲದ ಭಾರತೀಯ– ಅಮೆರಿಕನ್ ಆಶಾ ಸಿಂಗ್ ಅವರನ್ನು ಇಂಥದ್ದೇ ಪ್ರಮುಖ ಹುದ್ದೆಯೊಂದಕ್ಕೆಡಿಸೆಂಬರ್‌ನಲ್ಲಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.