ADVERTISEMENT

ಶ್ವೇತಭವನದಲ್ಲಿ ದೀಪಾವಳಿ ಆಚರಿಸಲಿರುವ ಬೈಡನ್‌

ಪಿಟಿಐ
Published 12 ಅಕ್ಟೋಬರ್ 2022, 10:49 IST
Last Updated 12 ಅಕ್ಟೋಬರ್ 2022, 10:49 IST
ಜೋ ಬೈಡೆನ್‌ –ಎಎಫ್‌ಪಿ ಚಿತ್ರ
ಜೋ ಬೈಡೆನ್‌ –ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಇದೇ 24ರಂದು ಶ್ವೇತಭವನದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ.

ಬೈಡನ್‌ ಅವರು, ಅಮೆರಿಕದಲ್ಲಿರುವ ಭಾರತೀ‌ಯ ಸಮುದಾಯದ ಸದಸ್ಯರು ಮತ್ತು ತಮ್ಮ ಆಡಳಿತದಲ್ಲಿ ಭಾಗಿಯಾಗಿರುವರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. ಹಬ್ಬದ ಆಚರಣೆಯಲ್ಲಿ ಬೈಡನ್‌ ಪತ್ನಿ ಜಿಲ್‌ ಅವರೂ ಪಾಲ್ಗೊಳ್ಳಲಿದ್ದಾರೆ. ಶ್ವೇತಭವನದಲ್ಲಿ ಆಚರಿಸಲಾಗುವ ಈ ಹಬ್ಬದ ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಈ ಮಧ್ಯೆ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತೀಯ ಸಮುದಾಯದ ಸದಸ್ಯರೊಡನೆ ಫ್ಲಾರಿಡಾದಲ್ಲಿರುವ ತಮ್ಮಮಾರ್-ಎ-ಲಾಗೊ ರೆಸಾರ್ಟ್‌ನಲ್ಲಿ ಇದೇ 21ರಂದು ದೀಪಾವಳಿ ಆಚರಿಸಲಿದ್ದಾರೆ ಎಂದು ರಿಪಬ್ಲಿಕನ್‌ ಹಿಂದೂ ಒಕ್ಕೂಟದ (ಆರ್‌ಎಚ್‌ಸಿ) ಶಲಭ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.