ADVERTISEMENT

ಜೋ ಬೈಡನ್ ತಂಡಕ್ಕೆ ಮಾಹಿತಿ ನೀಡದ ಟ್ರಂಪ್ ತಂಡ

ಪಿಟಿಐ
Published 14 ನವೆಂಬರ್ 2020, 13:56 IST
Last Updated 14 ನವೆಂಬರ್ 2020, 13:56 IST
ಜೋ ಬೈಡನ್ ಮತ್ತು ಡೊನಾಲ್ಡ್ ಟ್ರಂಪ್
ಜೋ ಬೈಡನ್ ಮತ್ತು ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಅಧಿಕಾರಿಗಳು ಗುಪ್ತಚರ ದಳದ ವರದಿ ಸೇರಿದಂತೆ ಇನ್ನಿತರ ಭದ್ರತಾ ಮಾಹಿತಿಗಳನ್ನು ನೀಡುತ್ತಿಲ್ಲ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರ ತಂಡವು ದೂರಿದೆ.

‘ಆಂತರಿಕ ಭದ್ರತೆಯ ವಿಷಯದಲ್ಲಿ ಅಮೆರಿಕವು ಎದುರಿಸುತ್ತಿರುವ ಬೆದರಿಕೆ ಸೇರಿದಂತೆ ಇನ್ನಿತರ ಭದ್ರತಾ ವಿಷಯಗಳಿಗೆ ಸಂಬಂಧಿಸಿದಂತೆ ನಿಯೋಜಿತ ಅಧ್ಯಕ್ಷರಿಗಾಗಲೀ, ರಾಷ್ಟ್ರೀಯ ಭದ್ರತಾ ತಂಡಕ್ಕಾಗಲೀ ಮಾಹಿತಿ ದೊರೆತಿಲ್ಲ. ಇದು ಆಶ್ಚರ್ಯಕರ ಸಂಗತಿಯಾದರೂ ನಿಜ’ ಎಂದು ಬೈಡನ್ ತಂಡದ ಸಲಹೆಗಾರ ಜೆನ್ ಸಾಕಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಟ್ರಂಪ್ ಆಡಳಿತದ ಅಧಿಕಾರಿಗಳು ನೀಡುವ ಮಾಹಿತಿಯು ಮುಂದಿನ ದಿನಗಳಲ್ಲಿ ಅಮೆರಿಕದ ಜನರನ್ನು ಒಗ್ಗೂಡಿಸಲು ಹಾಗೂ ಸಾಂಕ್ರಾಮಿಕ ರೋಗವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಲಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.