ADVERTISEMENT

ಭಾರತದ ಗಡಿಯಲ್ಲಿ ಚೀನಾದ ಮಿಲಿಟರಿ ಆಕ್ರಮಣ ವಿರೋಧಿಸುವ ಕಾಯ್ದೆ ರೂಪಿಸಿದ ಅಮೆರಿಕ

ಡೊನಾಲ್ಡ್ ಟ್ರಂಪ್ ವಿರೋಧದ ನಡುವೆ ಕಾಯ್ದೆಪರವಾಗಿ ಮತಚಲಾಯಿಸಿದ ಸಂಸದರು

ಏಜೆನ್ಸೀಸ್
Published 2 ಜನವರಿ 2021, 6:26 IST
Last Updated 2 ಜನವರಿ 2021, 6:26 IST
ಅಮೆರಿಕ ಶ್ವೇತಭವನದ ಸಂಗ್ರಹ ಚಿತ್ರ (ಎಎಫ್‌ಪಿ)
ಅಮೆರಿಕ ಶ್ವೇತಭವನದ ಸಂಗ್ರಹ ಚಿತ್ರ (ಎಎಫ್‌ಪಿ)   

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧದ ನಡುವೆ ಭಾರತದ ಗಡಿಯಲ್ಲಿ ಚೀನಾದ ಮಿಲಿಟರಿ ಆಕ್ರಮಣವನ್ನು ವಿರೋಧಿಸುವ ಮಸೂದೆಯನ್ನು ಅಮೆರಿಕದ ಸಂಸತ್ತು ಕಾಯ್ದೆಯನ್ನಾಗಿ ರೂಪಿಸಿದೆ.

ಇತ್ತೀಚೆಗೆ ಸೆನೆಟ್‌ನಲ್ಲಿ ಅನುಮೋದನೆ ಗೊಂಡಿದ್ದ ‘ರಾಷ್ಟ್ರೀಯ ರಕ್ಷಣಾ ದೃಢೀಕರಣ (ಎನ್‌ಡಿಡಿಎ)2021‘ ಮಸೂದೆಯನ್ನು ಶುಕ್ರವಾರ ಅಮೆರಿಕದ ಉಭಯ ಪಕ್ಷೀಯ ಸಂಸತ್ತು ಕಾಯ್ದೆಯಾಗಿ ಅನುಷ್ಠಾನಗೊಳಿಸಿತು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಡಿಸೆಂಬರ್ 23ರಂದು ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೇ, ಇದರಿಂದ ದೇಶದ ಭದ್ರತೆಗೆ ಅಪಾಯವಾಗುತ್ತದೆ ಎಂದು ಹೇಳಿದ್ದರು. ಇದೇ ಮೊದಲ ಬಾರಿಗೆ ಟ್ರಂಪ್ ವಿರೋಧವನ್ನು ತಳ್ಳಿ ಹಾಕಿದ ಉಭಯ ಪಕ್ಷದ ಸಂಸದರು ರಕ್ಷಣಾ ಮಸೂದೆಯನ್ನು ಕಾನೂನಾಗಿಸುವ ಪರ ಮತಚಲಾಯಿಸಿದರು.

ADVERTISEMENT

ಭಾರತೀಯ-ಅಮೆರಿಕನ್ ಸಂಸತ್‌ ಸದಸ್ಯ ರಾಜ ಕೃಷ್ಣಮೂರ್ತಿ ‘ಹೊಸ ವರ್ಷದ ದಿನದಂದು ಸೆನೆಟ್‌ನಲ್ಲಿ ಮತದಾನದ ಮೂಲಕ ಸಂಸತ್ತು ಚೀನಾದ ಮಿಲಿಟರಿ ಆಕ್ರಮಣ ಕೊನೆಗೊಳಿಸಲು ಚೀನಾಕ್ಕೆ ಕರೆ ನೀಡುವುದು ಸೇರಿದಂತೆ ನಾನು ನೀಡಿದ್ದ ಹಲವು ರಕ್ಷಣಾ ಅಂಶಗಳನ್ನು ಒಳಗೊಂಡ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಯನ್ನು ಕಾನೂನನ್ನಾಗಿ ಮಾಡಿದೆ‘ ಎಂದು ಹೇಳಿದ್ದಾರೆ.

ಡಿಸೆಂಬರ್ 15ರಂದು ಅಮೆರಿಕದ ಜನಪ್ರತಿನಿಧಿ ಸಭೆ ಮತ್ತು ಅಮೆರಿಕದ ಸೆನೆಟ್‌ ಎರಡೂ 740 ಬಿಲಿಯನ್ ಡಾಲರ್ ಮೊತ್ತದ ಎನ್‌ಡಿಎಎ 2020 ಮಸೂದೆಯನ್ನು ಅಂಗೀಕರಿಸಿದ್ದವು. ಇದರಲ್ಲಿ ಕೃಷ್ಣಮೂರ್ತಿಯವರು ನೀಡಿದ್ದ ಪ್ರಮುಖ ಅಂಶಗಳನ್ನೂ ಸೇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.