ADVERTISEMENT

ನದಿಗೆ ಇಳಿದ ಅಮೆರಿಕ ವಿಮಾನ: 136 ಪ್ರಯಾಣಿಕರು ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 4 ಮೇ 2019, 4:32 IST
Last Updated 4 ಮೇ 2019, 4:32 IST
   

ವಾಷಿಂಗ್ಟನ್‌: ಅಮೆರಿಕದ ಬೊಯಿಂಗ್‌ 737 ವಿಮಾನ ರನ್‌ವೇಯಿಂದ ಜಾರಿ ಸಮೀಪದ ಜಾನ್‌ ನದಿಗೆ ಇಳಿದಿರುವ ಘಟನೆ ಶುಕ್ರವಾರ ತಡರಾತ್ರಿ ವರದಿಯಾಗಿದೆ.

ವಿಮಾನದಲ್ಲಿ 136 ಪ್ರಯಾಣಿಕರಿದ್ದು ಎಲ್ಲರೂ ಅಪಾಯದಿಂದದ ಪಾರಾಗಿದ್ದಾರೆ ಎಂದು ಅಮೆರಿಕ ಪೊಲೀಸರು ತಿಳಿಸಿದ್ದಾರೆ. ಗ್ವಾಟೆನಾಮಾದಿಂದ ಬಂದ ವಿಮಾನ ಪ್ಲೋರಿಡಾದ ಜಾಕ್ಸನ್‌ವಿಲ್ಲೆ ನೌಕಾನೆಲೆಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್‌ವೇಯಿಂದ ಜಾರಿ ನದಿಗೆ ಇಳಿದಿದೆ.

ಅದೃಷ್ಟವಶಾತ್ ವಿಮಾನ ನದಿಯಲ್ಲಿ ಮುಳುಗಡೆಯಾಗದ ಪರಿಣಾಮ 136 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ಜಾಕ್ಸನ್ವಿಲ್ಲೆಯ ಮೇಯರ್‌ ಟ್ವೀಟ್ ಮಾಡಿದ್ದಾರೆ.

ADVERTISEMENT

ವಿಮಾನ ನದಿಯಲ್ಲಿ ಇಳಿದಿರುವ ಎರಡು ಫೋಟೊಗಳನ್ನು ಟ್ವೀಟ್‌ ಮಾಡಿದ್ದು ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.