ADVERTISEMENT

ಐಸಿಯುಗೆ ಬ್ರಿಟನ್ ಪ್ರಧಾನಿ ಸ್ಥಳಾಂತರ

ರಾಯಿಟರ್ಸ್
Published 7 ಏಪ್ರಿಲ್ 2020, 20:18 IST
Last Updated 7 ಏಪ್ರಿಲ್ 2020, 20:18 IST
ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌
ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌    

ಲಂಡನ್‌: ಕೋವಿಡ್‌ ಸೋಂಕಿಗೆ ತುತ್ತಾಗಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ.

55 ವರ್ಷದ ಜಾನ್ಸನ್‌ ಅವರನ್ನು ಸೇಂಟ್ ಥಾಮಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 10 ದಿನಗಳಿಂದ ಅವರುತೀವ್ರ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದಾರೆ.

‘ಪ್ರಧಾನಿ ಅವರಿಗೆಆಮ್ಲಜನಕ ನೆರವು ನೀಡಿದ್ದು, ನಿಗಾ ಘಟಕದಲ್ಲಿ ಇಡಲಾಗಿದೆ’ ಎಂದು ಸಂಪುಟ ಕಚೇರಿ ಸಚಿವ ಮೈಕೆಲ್‌ ಗೋವ್‌ ಅವರು ಸ್ಥಳೀಯ ರೇಡಿಯೊಗೆ ತಿಳಿಸಿದ್ದಾರೆ.

ಜಪಾನ್‌ನಲ್ಲಿ ತುರ್ತುಸ್ಥಿತಿ ಜಾರಿ

ಟೋಕಿಯೊ (ಎಎಫ್‌ಪಿ): ಕೋವಿಡ್‌ನಿಂದಾಗಿ ಟೊಕಿಯೊ ಸೇರಿದಂತೆ ದೇಶದ ಪ್ರಮುಖ ಪ್ರದೇಶಗಳಿಗೆ ಅನ್ವಯಿಸಿ ಪ್ರಧಾನಿ ಶಿಂಜೊ ಅಬೆ ತುರ್ತುಸ್ಥಿತಿ ಘೋಷಿಸಿ ದ್ದಾರೆ.ಮಂಗಳವಾರ ಮಧ್ಯರಾತ್ರಿಯಿಂದ ಇದು ಜಾರಿಗೆ ಬರಲಿದ್ದು, ಒಂದು ತಿಂಗಳವರೆಗೆ ಜಾರಿಯಲ್ಲಿರುವ ಎಂದು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.