ADVERTISEMENT

ಬ್ರೆಕ್ಸಿಟ್ ಒಪ್ಪಂದ: ಅಂಗೀಕರಿಸಿದ ಇ.ಯು

ಏಜೆನ್ಸೀಸ್
Published 25 ನವೆಂಬರ್ 2018, 20:15 IST
Last Updated 25 ನವೆಂಬರ್ 2018, 20:15 IST
ಐತಿಹಾಸಿಕ ಬ್ರೆಕ್ಸಿಟ್ ಒಪ್ಪಂದ ಅಂಗೀಕಾರವಾದ ಬಳಿಕ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು –ಎಎಫ್‌ಪಿ ಚಿತ್ರ 
ಐತಿಹಾಸಿಕ ಬ್ರೆಕ್ಸಿಟ್ ಒಪ್ಪಂದ ಅಂಗೀಕಾರವಾದ ಬಳಿಕ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು –ಎಎಫ್‌ಪಿ ಚಿತ್ರ    

ಬ್ರಸೆಲ್ಸ್‌: ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರೊಂದಿಗಿನ ಐತಿಹಾಸಿಕ ಬ್ರೆಕ್ಸಿಟ್ ಒಪ್ಪಂದಕ್ಕೆ ಐರೋಪ್ಯ ಒಕ್ಕೂಟ (ಇ.ಯು)
ಭಾನುವಾರ ಸಮ್ಮತಿ ನೀಡಿದೆ.

ವಿಶೇಷ ಬ್ರಸೆಲ್ಸ್‌ ಸಮಾವೇಶದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು,ಐರೋಪ್ಯ ಒಕ್ಕೂಟದಲ್ಲಿನ ನಾಲ್ಕು ದಶಕಗಳಬ್ರಿಟನ್‌ ಸದಸ್ಯತ್ವ ‘ದುರಂತ’ದಲ್ಲಿ ಅಂತ್ಯವಾಗಿರುವ ಕುರಿತು ನಾಯಕರು ದುಃಖ ವ್ಯಕ್ತಪಡಿಸಿದ್ದಾರೆ.

‘ಬ್ರಿಟನ್ ಹಾಗೂ ಯುರೋಪ್‌ಗೆಸಾಧ್ಯವಿದ್ದ ಹಾಗೂ ಅತ್ಯುತ್ತಮವಾದ ಆಯ್ಕೆ ಇದೊಂದೇ ಆಗಿತ್ತು’ ಎಂದು ಬ್ರಿಟನ್‌ನಲ್ಲಿ ಬಂಡಾಯವೆದ್ದಿರುವ ಸಂಸದರಿಗೆ ಇ.ಯು ಅಧ್ಯಕ್ಷ ಜೀನ್ ಕ್ಲಾಡ್ ಜಂಕರ್ ಅವರು ಇದೇ ವೇಳೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.