ADVERTISEMENT

Iran-Israel War: ಬುರ್ಜ್‌ ಖಲೀಫಾದಿಂದ ಜನರ ಸ್ಥಳಾಂತರ

ಏಜೆನ್ಸೀಸ್
Published 1 ಮಾರ್ಚ್ 2026, 1:11 IST
Last Updated 1 ಮಾರ್ಚ್ 2026, 1:11 IST
<div class="paragraphs"><p>ಪಾಮ್‌ ಜುಮೈರಾದಲ್ಲಿ ಕಾಣಿಸಿಕೊಂಡ ಬೆಂಕಿ</p></div>

ಪಾಮ್‌ ಜುಮೈರಾದಲ್ಲಿ ಕಾಣಿಸಿಕೊಂಡ ಬೆಂಕಿ

   

ದುಬೈ: ಇರಾನ್‌ ದಾಳಿಯಿಂದ ದುಬೈ ನಗರದಲ್ಲಿ ಕೂಡ ಸ್ಫೋಟಗಳು ಉಂಟಾದವು. ಇದರ ಬೆನ್ನಲ್ಲೇ, ವಿಶ್ವದಲ್ಲೇ ಅತ್ಯಂತ ಎತ್ತರದ ಕಟ್ಟಡ ಎಂದು ಖ್ಯಾತಿ ಪಡೆದ ‘ಬುರ್ಜ್‌ ಖಲೀಫಾ’ದಿಂದ ಜನರನ್ನು ಸ್ಥಳಾಂತರ ಮಾಡಲಾಯಿತು.

ಇರಾನ್‌ ನಡೆಸಿದ ಕ್ಷಿಪಣಿ ದಾಳಿಯಿಂದ ಏಷ್ಯಾದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಯುಎಇ ರಕ್ಷಣಾ ಇಲಾಖೆ ತಿಳಿಸಿದೆ.

ADVERTISEMENT

ನಗರದ ಮಾನವ ನಿರ್ಮಿತ ದ್ವೀಪ ಪಾಮ್‌ ಜುಮೈರಾದ ಒಳಭಾಗದಲ್ಲಿ ಕೂಡ ಬಾಂಬ್‌ ಸ್ಫೋಟಿಸಿದ್ದು, ದಟ್ಟಣೆಯ ಹೊಗೆ ಆವರಿಸಿದೆ. ಘಟನೆ ನಡೆದಿರುವುದನ್ನು ದುಬೈನ ಅಧಿಕಾರಿಗಳು ಖಚಿತಪಡಿಸಿದ್ದು, ತುರ್ತು ನಿರ್ವಹಣಾ ಪಡೆಯನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.