ADVERTISEMENT

ಉತ್ತರ ಕ್ಯಾಲಿಫೋರ್ನಿಯಾ: ಕಾಳ್ಗಿಚ್ಚಿಗೆ 10 ಮಂದಿ ಬಲಿ

ಏಜೆನ್ಸೀಸ್
Published 11 ಸೆಪ್ಟೆಂಬರ್ 2020, 6:16 IST
Last Updated 11 ಸೆಪ್ಟೆಂಬರ್ 2020, 6:16 IST
ಕಾಳ್ಗಿಚ್ಚಿನಿಂದಾಗಿ ಹೊರಹೊಮ್ಮಿರುವ ದಟ್ಟಹೊಗೆ ಉತ್ತರ ಕ್ಯಾಲಿಫೋರ್ನಿಯಾದ ನಗರಗಳ ಮೇಲೆ ಆವರಿಸಿರುವ ದೃಶ್ಯ
ಕಾಳ್ಗಿಚ್ಚಿನಿಂದಾಗಿ ಹೊರಹೊಮ್ಮಿರುವ ದಟ್ಟಹೊಗೆ ಉತ್ತರ ಕ್ಯಾಲಿಫೋರ್ನಿಯಾದ ನಗರಗಳ ಮೇಲೆ ಆವರಿಸಿರುವ ದೃಶ್ಯ   

ಗ್ರಿಡ್ಲೆ(ಅಮೆರಿಕ): ಉತ್ತರ ಕ್ಯಾಲಿಫೋರ್ನಿಯಾದ ಅರಣ್ಯಪ್ರದೇಶದಲ್ಲಿ ಉಂಟಾಗಿರುವ ಕಾಳ್ಗಿಚ್ಚಿನ ಜ್ವಾಲೆಗೆ ಹತ್ತು ಮಂದಿ ಬಲಿಯಾಗಿದ್ದು, ಹದಿನಾರು ಮಂದಿ ಕಾಣೆಯಾಗಿದ್ದಾರೆ.

ಈ ಕಾಳ್ಗಿಚ್ಚು ವರ್ಷದ ಅತ್ಯಂತ ಮಾರಕವಾದ ಬೆಂಕಿ ಅವಘಡವಾಗಿದೆ.ಕಾಣೆಯಾದವರಿಗಾಗಿ ಶೋಧಕಾರ್ಯ ಮುಂದುವರಿದಿದ್ದು, ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ವಾರದ ಆರಂಭದಲ್ಲಿ ಇಲ್ಲಿನ ನಾರ್ಥ್ ಕಾಂಪ್ಲೆಕ್ಸ್‌ನಿಂದಶುರುವಾದ ಬೆಂಕಿಯ ಜ್ವಾಲೆ ಬಿರುಗಾಳಿಯಿಂದಾಗಿ ಶುಕ್ರವಾರದ ಹೊತ್ತಿಗೆ ನಿಧಾನವಾಗಿ ಎಲ್ಲೆಡೆ ವ್ಯಾಪಿಸಿತು. ಬೆಂಕಿಯ ಜ್ವಾಲೆಯಿಂದ ಹೊಮ್ಮಿದ ಹೊಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಿಸಿಕೊಂಡಿತು. ಈಗ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮುಂದುವರಿಸಿದ್ದಾರೆ. ದಟ್ಟ ಹೊಗೆಯಿಂದಾಗಿ ಹೆಲಿಕಾಪ್ಟರ್‌ನಿಂದ ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವವರಿಗೂ ಸರಿಯಾಗಿ ದಾರಿ ಕಾಣದೆ, ಪರದಾಡುವಂತಾಗಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.