ADVERTISEMENT

ಕ್ಯಾಮರೂನ್‌ | 8ನೇ ಅವಧಿಗೂ ಸ್ಪರ್ಧೆ - 92 ವರ್ಷ ವಯಸ್ಸಿನ ಪಾಲ್‌ ಬಿಯಾ ಘೋಷಣೆ

ಏಜೆನ್ಸೀಸ್
Published 14 ಜುಲೈ 2025, 13:43 IST
Last Updated 14 ಜುಲೈ 2025, 13:43 IST
ಪಾಲ್‌ ಬಿಯಾ
ಪಾಲ್‌ ಬಿಯಾ   

ಯೌಂಡೆ (ಕ್ಯಾಮರೂನ್‌): ಅಕ್ಟೋಬರ್‌ನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ 8ನೇ ಅವಧಿಗೂ ಸ್ಪರ್ಧಿಸುವುದಾಗಿ ಕ್ಯಾಮರೂನ್‌ ದೇಶದ ಅಧ್ಯಕ್ಷ ಪಾಲ್‌ ಬಿಯಾ (92) ಅವರು ಭಾನುವಾರ ಘೋಷಿಸಿದ್ದಾರೆ. 

ವಯಸ್ಸಿನ ಕಾರಣಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದ್ದ ಸಂದರ್ಭದಲ್ಲೇ ಈ ಘೋಷಣೆ ಹೊರಬಿದ್ದಿದೆ. ಇದು ಚುನಾವಣೆಯ ಹಣಾಹಣಿಗೆ ಕಾರಣವಾಗಿದೆ.

ಈಕ್ವೆಟೋರಿಯಲ್‌ ಗಿನಿಯಾದ ಟಿಯೊಡೊರೊ ಒಬಿಯಾಂಗ್‌ ಅವರ ನಂತರ, ಆಫ್ರಿಕಾ ರಾಷ್ಟ್ರಗಳಲ್ಲೇ ಎರಡನೇ ಅತಿ ಹೆಚ್ಚು ಅವಧಿವರೆಗೆ ಅಧ್ಯಕ್ಷರಾಗಿ ಪಾಲ್‌ ಬಿಯಾ ಕಾರ್ಯನಿರ್ವಹಿಸಿದ್ದಾರೆ. ಅವರು ಆಗಾಗ್ಗೆ ಅನಾರೋಗ್ಯಕ್ಕೀಡಾಗಿ ವಿದೇಶಕ್ಕೆ ತೆರಳುತ್ತಿದ್ದರು. ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಕಳೆದ ವರ್ಷ ಹರಿದಾಡಿತ್ತು.

ADVERTISEMENT

1960ರಲ್ಲಿ ಫ್ರಾನ್ಸ್‌ನಿಂದ ಸ್ವಾತಂತ್ರ್ಯ ಸಿಕ್ಕ ಬಳಿಕ ಕ್ಯಾಮರೂನ್‌ನ ಎರಡನೇ ಅಧ್ಯಕ್ಷರಾಗಿ ಬಿಯಾ ಆಯ್ಕೆಯಾಗಿದ್ದರು. 1982ರಿಂದ ಅಧಿಕಾರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.