ADVERTISEMENT

ಅಫ್ಗನ್‌ನಿಂದ ನಾಗರಿಕರ ಸ್ಥಳಾಂತರಗೊಳಿಸುವ ಕಾರ್ಯಾಚರಣೆ ನಿಲ್ಲಿಸಿದ ಕೆನಡಾ

ಏಜೆನ್ಸೀಸ್
Published 26 ಆಗಸ್ಟ್ 2021, 15:18 IST
Last Updated 26 ಆಗಸ್ಟ್ 2021, 15:18 IST
ಕಾಬೂಲ್‌ ಏರ್‌ಪೋರ್ಟ್‌ನಲ್ಲಿ ಕೆನಡಾ ವಾಯುಸೇನೆಯ ವಿಮಾನ
ಕಾಬೂಲ್‌ ಏರ್‌ಪೋರ್ಟ್‌ನಲ್ಲಿ ಕೆನಡಾ ವಾಯುಸೇನೆಯ ವಿಮಾನ    

ಮಾಂಟ್ರಿಯಲ್: ಆಗಸ್ಟ್‌ 31ರ ಗಡುವಿನ ಅಂತ್ಯದವರೆಗೆ ತಮ್ಮ ನಾಗರಿಕರನ್ನು ಅಫ್ಗನ್‌ನಿಂದ ಸ್ಥಳಾಂತರ ಮಾಡಲು ವಿಶ್ವದ ಅನೇಕ ರಾಷ್ಟ್ರಗಳು ಪ್ರಯತ್ನ ನಡೆಸಿರುವ ಮಧ್ಯೆಯೇ ಕೆನಡಾ ತನ್ನ ಸ್ಥಳಾಂತರ ಕಾರ್ಯಚರಣೆಯನ್ನು ಅಂತ್ಯಗೊಳಿಸಿದೆ.

‘ಹಿಂದಿನ ದಿನವೇ ನಮ್ಮ ಸ್ಥಳಾಂತರ ಕಾರ್ಯಾಚರಣೆ ಸ್ಥಗಿತಗೊಂಡಿದೆ’ ಎಂದು ಕೆನಡಾದ ರಕ್ಷಣಾ ಸಚಿವಾಲಯದ ಪ್ರತಿನಿಧಿ ಲೆಫ್ಟಿನೆಂಟ್ ಜನರಲ್ ವೇಯ್ನ್ ಐರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಹತಾಶೆಯಿಂದ ದೇಶದಿಂದ ಹೊರ ಹೋಗುತ್ತಿರುವವರನ್ನು ರಕ್ಷಿಸಲು ನಾವು ಹೆಚ್ಚು ಹೊತ್ತು ಇರಬೇಕೆಂದು ಬಯಸುತ್ತೇವೆ. ಆದರೆ, ಅದು ಸಾಧ್ಯವಿಲ್ಲ ಎಂಬುದೇ ಬೇಸರದ ಸಂಗತಿ. ಅಲ್ಲಿನ ಪರಿಸ್ಥಿತಿಗಳು ಅತ್ಯಂತ ವೇಗವಾಗಿ ಹದಗೆಡುತ್ತಿವೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.