ADVERTISEMENT

ಬ್ರಿಟನ್‌ಗೆ ಮರಳುವ ಪ್ರಯಾಣಿಕರಿಗೆ ಕಡಿಮೆ ವೆಚ್ಚದ ಕೋವಿಡ್‌ ಪರೀಕ್ಷೆ ಸೌಲಭ್ಯ

ಪಿಟಿಐ
Published 24 ಅಕ್ಟೋಬರ್ 2021, 13:27 IST
Last Updated 24 ಅಕ್ಟೋಬರ್ 2021, 13:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌: ಲಸಿಕೆಯ ಪೂರ್ಣ ಪ್ರಮಾಣದ ಡೋಸ್‌ಗಳನ್ನು ಹಾಕಿಸಿಕೊಂಡಿರುವ ಪ್ರಯಾಣಿಕರು ಬ್ರಿಟನ್‌ಗೆ ಮರಳಿದಾಗ ಕೋವಿಡ್‌–19 ದೃಢೀಕರಣಕ್ಕೆ ಸಂಬಂಧಿಸಿದ ‘ಪಿಸಿಆರ್‌’ ಬದಲಾಗಿ ಕಡಿಮೆ ವೆಚ್ಚದ ‘ಎಲ್‌ಎಫ್‌ಟಿ’ ಪರೀಕ್ಷೆಗೆ ಒಳಗಾಗಬಹುದು.

ಈ ನಿಯಮ ಭಾನುವಾರದಿಂದ ಜಾರಿಗೆ ಬಂದಿದ್ದು, ಇದರಿಂದ ದೇಶದ ಪ್ರವಾಸೋದ್ಯಮ ಚೇತರಿಸಿಕೊಳ್ಳುವ ನಿರೀಕ್ಷೆ ಹೊಂದಲಾಗಿದೆ ಎಂದು ಮೂಲಗಳು ಹೇಳಿವೆ.

ಭಾರತ ಸೇರಿದಂತೆ 100 ದೇಶಗಳಲ್ಲಿ ಪೂರ್ಣಪ್ರಮಾಣದ ಲಸಿಕೆ ಹಾಕಿಸಿಕೊಂಡಿರುವ ಪ್ರಯಾಣಿಕರಿಗೆ ಈ ನಿಯಮದಿಂದ ಅನುಕೂಲವಾಗಲಿದೆ.

ADVERTISEMENT

ಬ್ರಿಟನ್‌ಗೆ ಪ್ರಯಾಣ ಕೈಗೊಳ್ಳುವುದರ ಮೇಲಿನ ನಿಷೇಧಕ್ಕೆ ಸಂಬಂಧಿಸಿದ ‘ಕೆಂಪು ಪಟ್ಟಿ’ಯಲ್ಲಿ ಹೆಸರು ಇರದ ದೇಶಗಳಿಂದ ಬರುವ ಪ್ರಯಾಣಿಕರಿಗೆ ಈ ಹೊಸ ಅನ್ವಯವಾಗುವುದು ಎಂದು ಸರ್ಕಾರ ತಿಳಿಸಿದೆ.

ಕೋವಿಡ್–19 ದೃಢಪಡಿಸುವ ‘ಪಾಲಿಮರೇಸ್ ಚೈನ್ ರಿಯಾಕ್ಷನ್’ (ಪಿಸಿಆರ್‌) ಎಂಬುದು ಅಧಿಕ ವೆಚ್ಚದ ಪರೀಕ್ಷೆಯಾಗಿದೆ. ಹೊಸ ನಿಯಮದ ಫಲವಾಗಿ ಪ್ರಯಾಣಿಕರು ಕಡಿಮೆ ವೆಚ್ಚದ ‘ಲ್ಯಾಟರಲ್ ಫ್ಲೊ ಟೆಸ್ಟ್‌’ (ಎಲ್‌ಎಫ್‌ಟಿ) ಪರೀಕ್ಷೆಗೆ ಒಳಪಡಬಹುದು.

ಬ್ರಿಟನ್‌ಗೆ ಬಂದಿಳಿದ ಕೂಡಲೇ ಪ್ರಯಾಣಿಕರು ಈ ಪರೀಕ್ಷೆಗೆ ಒಳಗಾಬಹುದು. ಇದಕ್ಕಾಗಿ ಆಯ್ದ ವಿಮಾನನಿಲ್ದಾಣಗಳಲ್ಲಿ ಕೋವಿಡ್‌–19 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.