ADVERTISEMENT

ಅಮೆರಿಕ ಅಲ್ಲ, ನಾವೇ ಈಗಲೂ ಭಾರತದ ಅಗ್ರ ವ್ಯಾಪಾರ ಪಾಲುದಾರ: ಚೀನಾ

ಪಿಟಿಐ
Published 31 ಮೇ 2022, 14:50 IST
Last Updated 31 ಮೇ 2022, 14:50 IST
ಝಾವೊ ಲಿಜಿಯನ್
ಝಾವೊ ಲಿಜಿಯನ್   

ಬೀಜಿಂಗ್: ‘ಕಳೆದ ಆರ್ಥಿಕ ವರ್ಷದಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಚೀನಾ ಈಗಲೂ ಭಾರತದ ಅಗ್ರ ಪಾಲುದಾರ ದೇಶವಾಗಿದ್ದು, ಅಮೆರಿಕ ಅಲ್ಲ’ ಎಂದು ಚೀನಾ ಮಂಗಳವಾರ ಹೇಳಿದೆ.

ದೇಶದೊಂದಿಗಿನ ವ್ಯಾಪಾರಕ್ಕೆ ಸಂಬಂಧಿಸಿ ಚೀನಾವನ್ನು ಹಿಂದಿಕ್ಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ ಎಂಬ ಭಾರತದ ಹೇಳಿಕೆಗೆ ಚೀನಾ ಈ ರೀತಿ ಪ್ರತಿಕ್ರಿಯಿಸಿದೆ.

‘ಇಂಥ ನಿರ್ಧಾರಕ್ಕೆ ಬರಲು ಭಾರತ ಸಿದ್ಧಪಡಿಸಿರುವ ಅಂಕಿ–ಅಂಶಗಳು ಹಾಗೂ ಉಭಯ ದೇಶಗಳ ನಡುವಿನ ವ್ಯಾಪಾರದ ಪ್ರಮಾಣವನ್ನು ಲೆಕ್ಕಹಾಕಲು ಅನುಸರಿಸಿದ ವಿಧಾನ ತಾರತಮ್ಯದಿಂದ ಕೂಡಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ಭಾರತದೊಂದಿಗೆ ವ್ಯಾಪಾರಕ್ಕೆ ಸಂಬಂಧಿಸಿ ಚೀನಾ ಈಗಲೂ ದೊಡ್ಡ ಪಾಲುದಾರ ದೇಶವಾಗಿದೆ. ಮೊದಲ ಬಾರಿಗೆ, 2021ರಲ್ಲಿ ಉಭಯ ದೇಶಗಳ ನಡುವಿನ ವಹಿವಾಟು ₹ 7.7 ಲಕ್ಷ ಕೋಟಿ ಗಡಿ ದಾಟಿತ್ತು’ ಎಂದು ಅವರು ಹೇಳಿದ್ದಾರೆ.

‘ವ್ಯಾ‍‍‍ಪಾರದ ಪ್ರಮಾಣವನ್ನು ಲೆಕ್ಕ ಹಾಕಲು ಚೀನಾ ಹಾಗೂ ಭಾರತ ಅನುಸರಿಸುವ ವಿಧಾನಗಳು ಬೇರೆಯಾಗಿವೆ. ಚೀನಾದಲ್ಲಿ ಹಣಕಾಸು ವರ್ಷ ಜನವರಿಯಿಂದ ಡಿಸೆಂಬರ್‌ ವರೆಗೆ ಇದ್ದರೆ, ಭಾರತವು ಏಪ್ರಿಲ್‌ನಿಂದ ಮಾರ್ಚ್‌ ವರೆಗೆ ಅವಧಿಯನ್ನು ವಿತ್ತೀಯ ವರ್ಷ ಎಂಬುದಾಗಿ ಪರಿಗಣಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.