ADVERTISEMENT

ಚೀನಾ: ಮೂರು ಯುದ್ಧನೌಕೆಗಳ ಕಾರ್ಯಾಚರಣೆಗೆ ಚಾಲನೆ

ಪಿಟಿಐ
Published 25 ಏಪ್ರಿಲ್ 2021, 9:03 IST
Last Updated 25 ಏಪ್ರಿಲ್ 2021, 9:03 IST
ಚೀನಾದ ಯುದ್ಧನೌಕೆ
ಚೀನಾದ ಯುದ್ಧನೌಕೆ   

ಬೀಜಿಂಗ್‌: ಚೀನಾ ನಿರ್ಮಿತ ಮೂರು ಪ್ರಮುಖ ಯುದ್ಧನೌಕೆಗಳ ಕಾರ್ಯಾಚರಣೆಗೆ ಶನಿವಾರ ಚಾಲನೆ ನೀಡಲಾಯಿತು.

ಅಣ್ವಸ್ತ್ರವಿರುವ ಕ್ಷಿಪಣಿ ಹೊತ್ತ ಜಲಾಂತರ್ಗಾಮಿ, ವಿಧ್ವಂಸಕಾರಿ ಯುದ್ಧನೌಕೆ (ಟೈಪ್‌ 055), 30ಕ್ಕೂ ಅಧಿಕ ಹೆಲಿಕಾಪ್ಟರ್‌ ಹಾಗೂ ನೂರಾರು ಜನ ಯೋಧರನ್ನು ಹೊತ್ತೊಯ್ಯಬಲ್ಲ ಬೃಹತ್‌ ವಿನಾಶಕಾರಿ ಯುದ್ಧನೌಕೆಯ ಕಾರ್ಯಾಚರಣೆಗೆ ಸಾನ್ಯ ನೌಕಾನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ನೌಕಾನೆಲೆ ವಿವಾದಿತ ದಕ್ಷಿಣ ಚೀನಾ ಸಮುದ್ರದ ಹೈನನ್‌ ಪ್ರಾಂತ್ಯದಲ್ಲಿದೆ ಎಂದು ಹಾಂಗ್‌ಕಾಂಗ್ ಮೂಲದ ಸೌಥ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ.

ಪೀಪಲ್ಸ್‌ ಲಿಬರೇಷನ್‌ ಅರ್ಮಿ ನೇವಿಯನ್ನು (ಪಿಎಲ್‌ಎಎನ್‌) ಭಾರಿ ಪ್ರಮಾಣದಲ್ಲಿ ಆಧುನೀಕರಣಗೊಳಿಸುವ ಭಾಗವಾಗಿ ಈ ಮೂರು ಶಕ್ತಿಶಾಲಿ ಯುದ್ಧನೌಕೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.