ADVERTISEMENT

ಕೊರೊನಾ ವೈರಸ್‌: ಒಂದೇ ದಿನ 108 ಸಾವು, 1000 ದಾಟಿದ ಬಲಿ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 10:05 IST
Last Updated 11 ಫೆಬ್ರುವರಿ 2020, 10:05 IST
ಕೊರೊನಾ ವೈರಸ್‌ನಿಂದ ರಕ್ಷಣೆಗೆ ಮುಖವಾಡ
ಕೊರೊನಾ ವೈರಸ್‌ನಿಂದ ರಕ್ಷಣೆಗೆ ಮುಖವಾಡ   

ಬೀಜಿಂಗ್‌:ಕೊರೊನಾವೈರಸ್‌ ಸೋಂಕಿನಿಂದ ಚೀನಾದಲ್ಲಿ ಸೋಮವಾರ ಒಂದೇ ದಿನ 108 ಜನರು ಬಲಿಯಾಗಿದ್ದು, ಈಸೋಂಕಿಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 1,016ಕ್ಕೆ ಏರಿದೆ ಎಂದುರಾಷ್ಟ್ರೀಯ ಆರೋಗ್ಯ ಆಯೋಗ ಮಂಗಳವಾರ ಹೇಳಿದೆ.

ಕೊರೊನಾವೈರಸ್ಸೋಂಕಿಗೆಮೃತಪಟ್ಟವರ ಸಂಖ್ಯೆ ಸಾವಿರದಾಟುತ್ತಿದ್ದಂತೆ, ಚೀನಾ ಸರ್ಕಾರವುಹುಬೈಪ್ರಾಂತ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳನ್ನುಅಮಾನತುಗೊಳಿಸಿರುವುದಾಗಿಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸೋಮವಾರಚೀನಾದಲ್ಲಿ 2,478 ಜನರಿಗೆ ಹೊಸದಾಗಿಕೊರೊನಾವೈರಸ್ ಸೋಂಕುತಗಲಿದ್ದು, ಸೋಂಕುಬಾಧಿತರಸಂಖ್ಯೆ42,638ಕ್ಕೆ ಏರಿದೆ.

ADVERTISEMENT

ವುಹಾನ್‌ನಲ್ಲಿ ಈಗಾಗಲೇ 20,000 ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.ಹುಬೈಪ್ರಾಂತ್ಯ ವುಹಾನ್‌ ಮೀನುಮಾರುಕಟ್ಟೆಯಲ್ಲಿ ಮೊದಲ ಬಾರಿಗೆಕೊರೊನಾಸೋಂಕು ಕಾಣಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.