ADVERTISEMENT

ಬೈಡನ್ ಆಯ್ಕೆಯಾದರೆ ಅಮೆರಿಕ-ಚೀನಾ ಬಾಂಧವ್ಯ ಸುಧಾರಿಸಬಹುದು: ಚೀನಾ ನಾಯಕರ ವಿಶ್ವಾಸ

ಪಿಟಿಐ
Published 23 ಅಕ್ಟೋಬರ್ 2020, 7:38 IST
Last Updated 23 ಅಕ್ಟೋಬರ್ 2020, 7:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೀಜಿಂಗ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಡೆಮಾಕ್ರಟಿಕ್ ಪಕ್ಷದ ‌ಜೊ ಬೈಡನ್ ಜಯಗಳಿಸಿದರೆ, ಚೀನಾ–ಅಮೆರಿಕ ನಡುವಿನ ವ್ಯಾಪಾರ, ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರದಲ್ಲಿನ ಸಂಘರ್ಷ ತುಸು ಕಡಿಮೆಯಾಗಬಹುದು ಎಂಬ ವಿಶ್ವಾಸವನ್ನು ಚೀನಾದ ನಾಯಕರು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಯಾವುದೇ ಬದಲಾವಣೆ ಚೀನಾದ ಬಗ್ಗೆ ಅಮೆರಿಕದ ರಾಜಕೀಯ ವಲಯದಲ್ಲಿ ಹತಾಶೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಅಮೆರಿಕದಲ್ಲಿರುವ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದ ಜನಪ್ರತಿನಿಧಿಗಳು ಮತ್ತು ಮತದಾರರು ಚೀನಾದೊಂದಿಗೆ ಮೃದುಧೋರಣೆ ಹೊಂದಲು ಇಷ್ಟವಿಲ್ಲವೆಂದು ತೋರುತ್ತದೆ. ಈ ಚುನಾವಣೆಯ ಫಲಿತಾಂಶವನ್ನು ಲೆಕ್ಕಿಸದೇ, ಉಭಯ ರಾಷ್ಟ್ರಗಳ ನಡುವೆ ಕಲಹಗಳು ಮುಂದುವರಿಯಬಹುದು ಎಂದು ಅಂದಾಜಿಸಲಾಗುತ್ತಿದೆ.

ಕೊರೊನಾ ಸಾಂಕ್ರಾಮಿಕ ರೋಗದ ನಡುವೆಯೂ ತಂತ್ರಜ್ಞಾನ, ವ್ಯಾಪಾರ, ರಕ್ಷಣೆ ಮತ್ತು ಬೇಹುಗಾರಿಕೆ ಕ್ಷೇತ್ರದಲ್ಲಿ ಅಮೆರಿಕ – ಚೀನಾ ನಡುವಿನ ಸಂಬಂಧಗಳು ಕೆಳಮಟ್ಟಕ್ಕೆ ಇಳಿದಿವೆ.ಹಲವು ಕ್ಷೇತ್ರಗಳಲ್ಲಿರುವ ಭಿನ್ನಾಭಿಪ್ರಾಯದ ಹೊರತಾಗಿಯೂ ಎರಡೂ ಪಕ್ಷಗಳು ಚೀನಾದೊಂದಿಗೆ ವ್ಯಾಪಾರ ಮತ್ತು ಹಾಂಗ್‌ಕಾಂಗ್‌, ತೈವಾನ್ ಜತೆಗಿನ ನಿಲುವು ಮತ್ತು ಕ್ಸಿಯಾಂಗ್‌ ಧಾರ್ಮಿಕ, ಜನಾಂಗೀಯ ಅಲ್ಪಸಂಖ್ಯಾತರ ಬಗೆಗಿನ ನಿಲುವನ್ನು ಟೀಕಿಸುತ್ತಿವೆ. ‌

ADVERTISEMENT

’ಅಮೆರಿಕದ ಸಾರ್ವಜನಿಕರೂ ಚೀನಾದ ಬಗ್ಗೆ ಅಷ್ಟೇ ನಕಾರಾತ್ಮಕ ಧೋರಣೆ ಹೊಂದಿದ್ದಾರೆ’ ಎಂದು ಪ್ಯೂ ರಿಸರ್ಚ್ ಸೆಂಟರ್ ಮಾರ್ಚ್‌ ತಿಂಗಳಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಆ ಸಮೀಕ್ಷೆಯಲ್ಲಿ ಮೂರನೇ ಎರಡರಷ್ಟು ಜನರು ಚೀನಾದ ಬಗ್ಗೆ ’ಪ್ರತಿಕೂಲವಾದ ಅಭಿಪ್ರಾಯಗಳನ್ನು’ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.