ADVERTISEMENT

ಅಮೆರಿಕ ಮೇಲೆ ಚೀನಾ ವೀಸಾ ನಿರ್ಬಂಧ

ಪಿಟಿಐ
Published 14 ಏಪ್ರಿಲ್ 2025, 16:20 IST
Last Updated 14 ಏಪ್ರಿಲ್ 2025, 16:20 IST
   

ಬೀಜಿಂಗ್: ಚೀನಾದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಅಮೆರಿಕವು ವೀಸಾ ನಿರ್ಬಂಧಗಳನ್ನು ಹೇರಿದ ಬೆನ್ನಲ್ಲೇ, ಟಿಬೆಟ್ ವಿಚಾರದಲ್ಲಿ ‘ಆಘಾತಕಾರಿ’ ಬಗೆಯಲ್ಲಿ ನಡೆದುಕೊಂಡ ಅಮೆರಿಕದ ಅಧಿಕಾರಿಗಳನ್ನು ಗುರಿಯಾಗಿಸಿ ಚೀನಾ ಕೂಡ ವೀಸಾ ನಿರ್ಬಂಧ ಜಾರಿಗೊಳಿಸಿದೆ.

ಟಿಬೆಟ್‌ನ ವಿಚಾರವು ಸಂಪೂರ್ಣವಾಗಿ ಚೀನಾದ ಆಂತರಿಕ ಸಂಗತಿ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಹೇಳಿದ್ದಾರೆ. ಟಿಬೆಟ್ ಪ್ರದೇಶವನ್ನು ಚೀನಾ ಷಿಜಾಂಗ್ ಎಂದು ಗುರುತಿಸುತ್ತದೆ.

‘ವಿದೇಶಗಳ ಸ್ನೇಹಿತರು ಚೀನಾದ ಷಿಜಾಂಗ್ ಪ್ರದೇಶದಲ್ಲಿ ಪ್ರವಾಸ ಮಾಡುವುದನ್ನು, ಅಲ್ಲಿ ವಹಿವಾಟು ನಡೆಸುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಯಾವುದೇ ದೇಶ ಅಥವಾ ವ್ಯಕ್ತಿಯು ಮಾನವ ಹಕ್ಕುಗಳು, ಧರ್ಮ ಮತ್ತು ಸಂಸ್ಕೃತಿಯ ಸೋಗಿನಲ್ಲಿ ಅಲ್ಲಿ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸುವುದನ್ನು ನಾವು ವಿರೋಧಿಸುತ್ತೇವೆ’ ಎಂದು ಲಿನ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.