

ಪ್ರಾತಿನಿಧಿಕ ಚಿತ್ರ
ಬೀಜಿಂಗ್: ವ್ಯೋಮನೌಕೆಗೆ ಹಾನಿಯಾದ ಕಾರಣ ಚೀನಾ ಬಾಹ್ಯಾಕಾಶ ಕೇಂದ್ರದಲ್ಲಿ ಅತಂತ್ರರಾಗಿದ್ದ ಮೂವರು ಗಗನಯಾನಿಗಳನ್ನು ವಾಪಸ್ ಕರೆತರಲು ಶೆಂಝೌ-22 ಬಾಹ್ಯಾಕಾಶ ನೌಕೆಯನ್ನು ಚೀನಾ ಮಂಗಳವಾರ ಉಡಾವಣೆ ಮಾಡಿತು.
ಇದಕ್ಕೂ ಮುನ್ನ, ಶೆಂಝೌ-20 ನೌಕೆಯಲ್ಲಿ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ಚೀನಾದ ಗಗನಯಾನಿಗಳ ತಂಡವು ವಾಪಸ್ ಭೂಮಿಗೆ ಬರುವಾಗ ನೌಕೆಯ ಕಿಟಕಿಗೆ ಹಾನಿಯಾಗಿತ್ತು. ಇದರಿಂದಾಗಿ ಅವರು 9 ದಿನ ವಿಳಂಬವಾಗಿ ಶೆಂಝೌ-21 ನೌಕೆಯ ಮೂಲಕ ಭೂಮಿಗೆ ಮರಳಿದ್ದರು. ಶೆಂಝೌ-21 ನೌಕೆಯು ಬದಲಿ ಗಗನಯಾನಿಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ಕೊಂಡೊಯ್ದಿತ್ತು. ಅವರು ಅಲ್ಲಿ ಅತಂತ್ರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.