ADVERTISEMENT

ಚೀನಾ-ಪಾಕ್‌ ವಿದೇಶಾಂಗ ಸಚಿವರ ಭೇಟಿ: ದ್ವಿಪಕ್ಷೀಯ ಬಾಂಧವ್ಯ ಕುರಿತು ಚರ್ಚೆ

ಪಿಟಿಐ
Published 21 ಆಗಸ್ಟ್ 2025, 13:58 IST
Last Updated 21 ಆಗಸ್ಟ್ 2025, 13:58 IST
<div class="paragraphs"><p>ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್‌ ಡಾರ್‌ ಅವರ ಜೊತೆ ಗುರುವಾರ ಮಾತುಕತೆ ನಡೆಸಿದರು&nbsp;  </p></div>

ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್‌ ಡಾರ್‌ ಅವರ ಜೊತೆ ಗುರುವಾರ ಮಾತುಕತೆ ನಡೆಸಿದರು 

   

–ಎಎಫ್‌ಪಿ ಚಿತ್ರ 

ಇಸ್ಲಾಮಾಬಾದ್‌: ವಿದೇಶಾಂಗ ಸಚಿವ ಇಶಾಕ್‌ ಡಾರ್‌ ಅವರು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅವರನ್ನು ಗುರುವಾರ ಭೇಟಿ ಮಾಡಿ, ದ್ವಿಪಕ್ಷೀಯ ಒಪ್ಪಂದಗಳ ಕುರಿತು ವ್ಯಾಪಕ ಸಮಾಲೋಚನೆ ನಡೆಸಿದ್ದಾರೆ.

ADVERTISEMENT

‘ವಾಂಗ್‌ ಯಿ ಅವರೊಂದಿಗೆ ನಡೆದ ಮಾತುಕತೆ ವೇಳೆ, ಪ್ರಾದೇಶಿಕ ಮತ್ತು ಜಾಗತಿಕವಾಗಿ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಿತು. ಎರಡೂ ದೇಶಗಳ ಹಿತಾಸಕ್ತಿ ಒಳಗೊಂಡ ವಿಚಾರಗಳ ಬಗ್ಗೆಯೂ ನಡೆದ ಮಾತುಕತೆ ಫಲಪ್ರದವಾಗಿತ್ತು’ ಎಂದು ಸಭೆ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಡಾರ್‌ ಹೇಳಿದರು.

‘ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌(ಸಿಪಿಇಸಿ) 2.0’, ವ್ಯಾಪಾರ, ಆರ್ಥಿಕ ಸಂಬಂಧಗಳು ಹಾಗೂ ಸಹಕಾರ ವೃದ್ಧಿ ಸೇರಿ ಹಲವು ವಿಚಾರಗಳ ಬಗ್ಗೆ ಉಭಯ ನಾಯಕರು ದೀರ್ಘ ಸಮಾಲೋಚನೆ ನಡೆಸಿದ್ದಾರೆ’ ಎಂದು ವಿದೇಶಾಂಗ ಕಚೇರಿ ಹೇಳಿದೆ.

ಭೇಟಿ: ಇದಕ್ಕೂ ಮುನ್ನ, ವಾಂಗ್‌ ಯಿ ಅವರು ಪಾಕಿಸ್ತಾನ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಹಾಗೂ ಪ್ರಧಾನಿ ಶಹಬಾಜ್‌ ಶರೀಫ್‌ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.

ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ನಡೆದ ತ್ರಿಪಕ್ಷೀಯ ಸಭೆಯಲ್ಲಿ ಪಾಲ್ಗೊಂಡ ಬಳಿಕ, ಬುಧವಾರ ರಾತ್ರಿ ವಾಂಗ್‌ ಅವರು ಇಸ್ಲಾಮಾಬಾದ್‌ಗೆ ಬಂದಿಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.