ADVERTISEMENT

ಕೋವಿಡ್‌-19 ಮೂಲ ಪತ್ತೆಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಸಹಕರಿಸಲು ಸಿದ್ಧ: ಚೀನಾ

ಪಿಟಿಐ
Published 9 ಜನವರಿ 2021, 8:05 IST
Last Updated 9 ಜನವರಿ 2021, 8:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಿಜೀಂಗ್‌: ಕೋವಿಡ್‌–19 ಮೂಲದ ಬಗ್ಗೆ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಜ್ಞರಿಗೆ ಸಹಕಾರ ನೀಡಲು ಚೀನಾ ಸಿದ್ಧವಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಹಮತ ಏರ್ಪಟ್ಟಿದೆ ಎಂದು ಚೀನಾದ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

‘ಡಬ್ಲ್ಯುಎಚ್‌ಒ ತಜ್ಞರು ವುಹಾನ್‌ಗೆ ಭೇಟಿ ನೀಡಲಿದ್ದಾರೆ. ಆದರೆ ಅವರ ಭೇಟಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಈ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾವು ತನಿಖಾ ಸಿದ್ಧತೆಗಳ ಬಗ್ಗೆ ಒಮ್ಮತ ಅಭಿ‍ಪ್ರಾಯಕ್ಕೆ ಬಂದಿವೆ’ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಉಪ ಮುಖ್ಯಸ್ಥ ಜೆಂಗ್‌ ಯೆಕ್ಸಿನ್‌ ಅವರು ಮಾಹಿತಿ ನೀಡಿದ್ದಾರೆ.

‘ಡಬ್ಲ್ಯುಎಚ್‌ಒ ತಜ್ಞರ ಜತೆ ಚೀನಾದ ತಜ್ಞರ ತಂಡ ಕೂಡ ವುಹಾನ್‌ಗೆ ಭೇಟಿ ನೀಡಿ, ಜಂಟಿಯಾಗಿ ತನಿಖೆಯನ್ನು ನಡೆಸಲಿವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.