ADVERTISEMENT

ಉಯಿಘರ್‌ ಮುಸ್ಲಿಮರ ಪರ ವಿಶ್ವಸಂಸ್ಥೆ ವರದಿ: ಚೀನಾ ಖಂಡನೆ

ಏಜೆನ್ಸೀಸ್
Published 1 ಸೆಪ್ಟೆಂಬರ್ 2022, 14:46 IST
Last Updated 1 ಸೆಪ್ಟೆಂಬರ್ 2022, 14:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ಚೀನಾದ ಪಶ್ಚಿಮ ಷಿನ್‌ಜಿಯಾಂಗ್ ಮತ್ತಿತರ ಪ್ರದೇಶಗಳಲ್ಲಿ ಉಯಿಘರ್‌ ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದವರ ಬಂಧನ ಮಾನವೀಯತೆಗೆ ವಿರುದ್ಧವಾದುದು ಎಂಬ ವಿಶ್ವಸಂಸ್ಥೆಯ ವರದಿಯನ್ನು ಚೀನಾ ಬಲವಾಗಿ ಖಂಡಿಸಿದೆ.

ಬುಧವಾರ ತಡರಾತ್ರಿ ಜಿನಿವಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಭಯೋತ್ಪಾದನೆ ವಿರೋಧಿ ಮತ್ತು ತೀವ್ರವಾದಿ ವಿರೋಧಿ ನೀತಿಗಳ ಮೂಲಕ ಚೀನಾ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ.

ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಜಪಾನ್‌ ಸರ್ಕಾರ ವಿಶ್ವಸಂಸ್ಥೆಯ ವರದಿಯನ್ನು ಸ್ವಾಗತಿಸಿವೆ. ಇದು ಚೀನಾ ಮತ್ತು ಇತರ ದೇಶಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.