ADVERTISEMENT

Covid-19 World Update| ಚೀನಾದಲ್ಲಿ ರೋಗ ಲಕ್ಷಣಗಳಿಲ್ಲದ 17 ಪ್ರಕರಣಗಳು ಪತ್ತೆ

ಏಜೆನ್ಸೀಸ್
Published 8 ಮೇ 2020, 9:02 IST
Last Updated 8 ಮೇ 2020, 9:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮೊಸ್ಕೊ: ಶುಕ್ರವಾರ ಚೀನಾದಲ್ಲಿ 17 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ 16 ಮಂದಿಗೆ ರೋಗ ಲಕ್ಷಣಗಳು ಕಂಡುಬಂದಿಲ್ಲ.ಇವರು ಹುಬೇ ಪ್ರಾಂತ್ಯದವರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಜಿಲಿನ್ ಪ್ರಾಂತ್ಯದಲ್ಲಿ ಗುರುವಾರ ಕೋವಿಡ್ -19 ಪ್ರಕರಣವೊಂದು ಪತ್ತೆಯಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಹುಬೇ ಪ್ರಾಂತ್ಯದಲ್ಲಿ ರೋಗ ಲಕ್ಷಣಗಳು ಇಲ್ಲದೇ ಇರುವ ಹೊಸ 16 ಪ್ರಕರಣಗಳು ಪತ್ತೆಯಾಗಿದ್ದು ಅಂಥದ್ದೇ ಪ್ರಕರಣಗಳ ಸಂಖ್ಯೆ 845 ಆಗಿದೆ. ಇವರ ಮೇಲೆ ವೈದ್ಯಕೀಯ ತಂಡ ನಿಗಾ ಇರಿಸಿದೆ. ಒಟ್ಟಾರೆ ರೋಗ ಲಕ್ಷಣಗಳು ಕಂಡು ಬರದೆ ಸೋಂಕಿಗೊಳಗಾದವರ ಸಂಖ್ಯೆ 629 ಆಗಿದೆ.

ಕೋವಿಡ್ ರೋಗ ಇದ್ದರೂ ರೋಗ ಲಕ್ಷಣಗಳಾದ ಜ್ವರ, ಕೆಮ್ಮು ಅಥವಾ ಗಂಟಲು ನೋವು ಇವರಲ್ಲಿ ಕಂಡುಬರುವುದಿಲ್ಲ. ಹಾಗಾಗಿ ಇವರಿಂದ ಇತರಿಗೆ ಸೋಂಕು ತಗುಲುವ ಸಾಧ್ಯತೆಗಳು ಜಾಸ್ತಿಯಾಗಿದೆ.

ADVERTISEMENT

ಲಾಕ್‍ಡೌನ್ ಸಡಿಲಿಕೆ ಮಾಡಿದ ಕೂಡಲೇ ಪಾಕಿಸ್ತಾನದಲ್ಲಿ ಪ್ರಕರಣಗಳ ಸಂಖ್ಯೆ 25,000ಕ್ಕೇರಿದೆ.

ಕಳೆದ 24 ಗಂಟೆಗಳಲ್ಲಿ 1,764 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 25,837ಆಗಿದೆ.ಶುಕ್ರವಾರ 30 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 594 ತಲುಪಿದೆ.

ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಮಾಹಿತಿ ಪ್ರಕಾರ ಗುರುವಾರ 1,219,066 ಹೊಸ ಪ್ರಕರಣಗಳು ವರದಿಯಾಗಿವೆ. ಸಾವಿನ ಸಂಖ್ಯೆ73,297ಆಗಿದೆ.

ಜಾನ್ಸ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಅಂಕಿಅಂಶಗಳ ಪ್ರಕಾರ ಕೋವಿಡ್ ರೋಗದಿಂದ ಜಗತ್ತಿನಾದ್ಯಂತ 269729 ಮಂದಿ ಸಾವಿಗೀಡಾಗಿದ್ದಾರೆ.ಅಮೆರಿಕದಲ್ಲಿ 75670, ಬ್ರಿಟನ್‌ನಲ್ಲಿ 30689 ಮತ್ತು ಇಟಲಿಯಲ್ಲಿ 29958 ಮಂದಿ ಸಾವಿಗೀಡಾಗಿದ್ದಾರೆ.

ಒಟ್ಟು ಪ್ರಕರಣಗಳ ಸಂಖ್ಯೆ 3,859,559. ಈ ಪೈಕಿ ಅಮೆರಿಕದಲ್ಲಿ ವರದಿಯಾಗಿರುವ ಪ್ರಕರಣಗಳ ಸಂಖ್ಯೆ 1256972. ಸ್ಪೇನ್‌ನಲ್ಲಿ 221447, ಇಟಲಿಯಲ್ಲಿ 215858 ಮತ್ತು ಬ್ರಿಟನ್‌ನಲ್ಲಿ 207977 ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.