ADVERTISEMENT

ಚೀನಾ: ಹೊಸದಾಗಿ 51 ಕೊರೊನಾ ಪ್ರಕರಣಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 25 ಮೇ 2020, 17:12 IST
Last Updated 25 ಮೇ 2020, 17:12 IST

ಬೀಜಿಂಗ್: ಚೀನಾದಲ್ಲಿ ಸೋಮವಾರ ಹೊಸದಾಗಿ 51 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 38 ವುಹಾನ್‌ ನಗರದಲ್ಲಿ ಕಾಣಿಸಿಕೊಂಡಿವೆ.

ಹೊಸ ಪ್ರಕರಣಗಳಲ್ಲಿ 40 ಮಂದಿಗೆ ಕೊರೊನಾ ಸೋಂಕಿನ ಲಕ್ಷಣಗಳು ಇರಲಿಲ್ಲ. ಕಳೆದ ಹತ್ತು ದಿನಗಳಲ್ಲಿ ಚೀನಾದಲ್ಲಿ 60 ಲಕ್ಷಕ್ಕೂ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಚೀನಾದಲ್ಲಿ ಭಾನುವಾರ ದೇಶಿಯವಾಗಿ ಹರಡಿರುವ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಮಂಗೋಲಿಯಾದ ಸ್ವಾಯತ್ತ ಪ್ರದೇಶದಲ್ಲಿ 10 ಮತ್ತು ಸಿಚುವಾನ್ ಪ್ರಾಂತ್ಯದಲ್ಲಿ 1 ಪ್ರಕರಣ ಸೇರಿದಂತ ಒಟ್ಟು 11 ಬಾಹ್ಯ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.

ADVERTISEMENT

ರೋಗ ಲಕ್ಷಣ ರಹಿತ 40 ಪ್ರಕರಣಗಳಲ್ಲಿ 38 ಪ್ರಕರಣಗಳು ವುಹಾನ್ ನಗರದಲ್ಲಿ ವರದಿಯಾಗಿವೆ. ಪ್ರಸ್ತುತ ಇಲ್ಲಿ ಒಂದು ಕೋಟಿಗೂ ಹೆಚ್ಚಿನ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ರೋಗಲಕ್ಷಣ ರಹಿತ 396 ಜನರನ್ನು ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ. ಇದರಲ್ಲಿ 326 ಮಂದಿ ವುಹಾನ್‌ ನಗರಕ್ಕೆ ಸೇರಿದವರು ಎಂದು ಆಯೋಗ ಹೇಳಿದೆ.

ಚೀನಾದಲ್ಲಿ ಭಾನುವಾರದ ವೇಳೆಗೆ ಒಟ್ಟು 82,985 ಕೋವಿಡ್‌–19 ಪ್ರಕರಣಗಳು ವರದಿಯಾಗಿದ್ದು, 4,634ಮಂದಿ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.