ADVERTISEMENT

‌ಕೋವಿಡ್–19 | ಚೀನಾದಲ್ಲಿ ಸೋಂಕು ಪ್ರಕರಣಗಳ ದಿಢೀರ್‌ ಏರಿಕೆ

ಪಿಟಿಐ
Published 14 ಜೂನ್ 2020, 6:13 IST
Last Updated 14 ಜೂನ್ 2020, 6:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌: ಚೀನಾದಲ್ಲಿ ಕೊರೊನಾ ಸೋಂಕಿನ 66 ಹೊಸ ಪ್ರಕರಣಗಳು ವರದಿಯಾಗಿದೆ.

ವುಹಾನ್‌ನಲ್ಲಿ ಕಾಣಿಸಿಕೊಂಡಿದ್ದ ಸೋಂಕು ಪ್ರಕರಣಗಳು ಏಪ್ರಿಲ್‌ನಲ್ಲಿ ನಿಯಂತ್ರಣಕ್ಕೆ ಬಂದಿವೆ ಎಂದು ಭಾವಿಸಲಾಗಿತ್ತು. ಆ ಬಳಿಕ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಭಾನುವಾರ ವರದಿಯಾಗಿದೆ.

ಬೀಜಿಂಗ್‌ನಲ್ಲಿ ಪ್ರಕರಣಗಳು ದಿಢೀರ್‌ ಏರಿಕೆಯಾಗಿರುವ ಕಾರಣ ಸೋಂಕು ಹರಡುವುದನ್ನು ತಡೆಯಲುಆರೋಗ್ಯ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ADVERTISEMENT

ಸೋಂಕಿನ ಲಕ್ಷಣಗಳು ಗೋಚರಿಸದ 103 ಜನರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ತಪಾಸಣೆಯಲ್ಲಿ ಸೋಂಕು ದೃಢವಾದರೂ ಜ್ವರ, ಕೆಮ್ಮು ಲಕ್ಷಣಗಳು ಕಾಣಿಸಿಕೊಳ್ಳದಂತಹ ಪ್ರಕರಣಗಳು ಇಲ್ಲಿ ಸಮಸ್ಯೆ ತಂದೊಡ್ಡಿವೆ. ಇತರರಿಗೆ ಈ ಸೋಂಕಿತರು ರೋಗ ಹರಡುವ ಭೀತಿ ಇದೆ.

ಮೂರು ದಿನಗಳಲ್ಲಿ ಬೀಜಿಂಗ್‌ನಲ್ಲಿ46 ಪ್ರಕರಣಗಳು ವರದಿಯಾಗಿದ್ದು ಅಧಿಕಾರಿಗಳನ್ನು ಅಚ್ಚರಿಗೊಳಿಸಿತ್ತು. ಈ ಕಾರಣದಿಂದಲೇ ಸ್ಥಳೀಯ ಮಾರುಕಟ್ಟೆಗಳನ್ನು ಬಂದ್‌ ಮಾಡುವ ನಿರ್ಧಾರವನ್ನು ಶನಿವಾರ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.