ADVERTISEMENT

ಕಂದಹಾರ್‌ ವಿಮಾನ ಹೈಜಾಕ್‌ ಉಗ್ರ ಕಪ್ಪು ಪಟ್ಟಿಗೆ: ಭಾರತದ ಪ್ರಯತ್ನಕ್ಕೆ ಚೀನಾ ತಡೆ

ಪಿಟಿಐ
Published 12 ಆಗಸ್ಟ್ 2022, 9:45 IST
Last Updated 12 ಆಗಸ್ಟ್ 2022, 9:45 IST
ಮಸೂದ್‌ ಅಜರ್‌
ಮಸೂದ್‌ ಅಜರ್‌   

ಬೀಜಿಂಗ್‌: ಪಾಕಿಸ್ತಾನದ ಜೈಶ್‌ ಎ ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಯ ಉಪ ಮುಖ್ಯಸ್ಥ ಅಬ್ದುಲ್‌ ರೌಫ್‌ ಅಜರ್‌ನನ್ನು ಕಪ್ಪು ಪಟ್ಟಿಗೆ ಸೇರಿಸುವ ಕುರಿತು ಭಾರತ ಮತ್ತು ಅಮೆರಿಕ ವಿಶ್ವಸಂಸ್ಥೆಯಲ್ಲಿ ಮಂಡಿಸಿರುವ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿರುವ ತನ್ನ ನಿಲುವನ್ನು ಚೀನಾವು ಗುರುವಾರ ಸಮರ್ಥಿಸಿಕೊಂಡಿದೆ.

ಅಜರ್‌ ವಿರುದ್ಧ ನಿರ್ಬಂಧ ಹೇರಬೇಕೆನ್ನುವ ಅರ್ಜಿಯ ಕುರಿತು ಮೌಲ್ಯ ಮಾಪನ ಮಾಡಲು ಹೆಚ್ಚಿನ ಸಮಯ ಬೇಕು ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ವಾಂಗ್‌ ವೆನ್‌ಬಿನ್‌ ಹೇಳಿದ್ದಾರೆ.

ಚೀನಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಇತರ ಸದಸ್ಯರೂ ಇದನ್ನು ಪಾಲಿಸುವ ನಂಬಿಕೆ ಇದೆ ಎಂದೂ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಜೆಇಎಂ ಮುಖ್ಯಸ್ಥ ಮಸೂದ್‌ ಅಜರ್‌ನ ಸಹೋದರ ಅಬ್ದುಲ್‌ ರೌಫ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಿ, ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಭಾರತ ಮತ್ತು ಅಮೆರಿಕ ವಿಶ್ವಸಂಸ್ಥೆಯಲ್ಲಿ ಮಂಡಿಸಿದ್ದ ಪ್ರಸ್ತಾವವನ್ನು ಚೀನಾ ಬುಧವಾರ ತಡೆ ಹಿಡಿದಿತ್ತು.

ಅಬ್ದುಲ್‌ ರೌಫ್‌ ಅಜರ್‌ ವಿರುದ್ಧ 2010ರ ಡಿಸೆಂಬರ್‌ನಲ್ಲಿ ಅಮೆರಿಕವು ನಿರ್ಬಂಧ ವಿಧಿಸಿತ್ತು.

ಅಬ್ದುಲ್ ರೌಫ್ ಅಜರ್ ಮತ್ತು ಆತನ ಸಹೋದರ ಮಸೂದ್ ಅಜರ್ ಕಂದಹಾರ್‌ ವಿಮಾನ (ಇಂಡಿಯನ್ ಏರ್‌ಲೈನ್ಸ್) ಅಪಹರಣ ಪ್ರಕರಣದಲ್ಲಿ ಭಾಗಿಯಾದ ಅತಿ ಪ್ರಮುಖ ಭಯೋತ್ಪಾದಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.