ADVERTISEMENT

ಭಾರತದೊಂದಿಗಿನ ಸಂಬಂಧಕ್ಕೆ ಹೆಚ್ಚು ಮಹತ್ವ: ಚೀನಾ

ಪಿಟಿಐ
Published 1 ಮಾರ್ಚ್ 2023, 16:06 IST
Last Updated 1 ಮಾರ್ಚ್ 2023, 16:06 IST
–
   

ಬೀಜಿಂಗ್: ‘ಭಾರತದೊಂದಿಗಿನ ಬಾಂಧವ್ಯಕ್ಕೆ ಚೀನಾ ಮಹತ್ವ ನೀಡುತ್ತದೆ. ಉಭಯ ದೇಶಗಳು ಹಾಗೂ ನಾಗರಿಕರ ಹಿತದೃಷ್ಟಿಯಿಂದ ಉತ್ತಮ ಸಂಬಂಧದ ಅಗತ್ಯ ಇದೆ’ ಎಂದು ಚೀನಾ ಬುಧವಾರ ಹೇಳಿದೆ.

ಜಿ–20 ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡಿರುವ ವಿದೇಶಾಂಗ ಸಚಿವ ಕಿನ್‌ ಗಾಂಗ್ ಅವರು, ಸಚಿವ ಜೈಶಂಕರ್‌ ಅವರೊಂದಿಗೆ ಗುರುವಾರ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಚೀನಾದ ಈ ಹೇಳಿಕೆಗೆ ಮಹತ್ವದ ಬಂದಿದೆ.

‘ಭಾರತ ಜೊತೆಗಿನ ಸಂಬಂಧವನ್ನು ಸುಧಾರಿಸುವುದು ಗಾಂಗ್ ಅವರ ಭೇಟಿಯ ಉದ್ದೇಶಗಳಲ್ಲೊಂದು’ ಎಂದು ಹಾಂಗ್‌ಕಾಂಗ್‌ ಮೂಲದ ’ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌’ ದೈನಿಕ ವರದಿ ಮಾಡಿದೆ.

ADVERTISEMENT

ಪೂರ್ವ ಲಡಾಖ್‌ ಗಡಿಯಲ್ಲಿ ಸಂಘರ್ಷ ಆರಂಭವಾದ ನಂತರ 17 ಸುತ್ತು ಮಾತುಕತೆ ನಡೆದಿದ್ದರೂ, ಭಾರತ ಮತ್ತು ಚೀನಾ ನಡುವಿನ ಸಂಬಂಧ ಸುಧಾರಿಸಿಲ್ಲ. ಈ ಕಾರಣದಿಂದಾಗಿಯೂ ಗಾಂಗ್‌ ಹಾಗೂ ಜೈಶಂಕರ್‌ ಭೇಟಿಗೆ ಮಹತ್ವದ ಬಂದಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.