ADVERTISEMENT

ಸಮರಾಭ್ಯಾಸ: ಥಾಯ್ಲೆಂಡ್‌ಗೆ ಯುದ್ಧವಿಮಾನ ಕಳುಹಿಸಿದ ಚೀನಾ

ಏಜೆನ್ಸೀಸ್
Published 13 ಆಗಸ್ಟ್ 2022, 13:09 IST
Last Updated 13 ಆಗಸ್ಟ್ 2022, 13:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ಯಾಂಕಾಕ್‌: ಜಂಟಿ ಸಮರಾಭ್ಯಾಸ ನಡೆಸಲು ಚೀನಾ ವಾಯುಪಡೆ ಭಾನುವಾರ ಥಾಯ್ಲೆಂಡ್‌ಗೆ ಯುದ್ಧ ವಿಮಾನಗಳು ಮತ್ತು ಬಾಂಬರ್‌ಗಳನ್ನು ಕಳುಹಿಸಿದೆ.

ವಾಯು ಭೂಮಿಯ ಮೇಲಿನ ನಿರ್ದಿಷ್ಟ ಗುರಿಗಳನ್ನು ಕೇಂದ್ರೀಕರಿಸಿ ನಡೆಸುವ ದಾಳಿ, ಸಣ್ಣ ಮತ್ತುದೊಡ್ಡ ಪ್ರಮಾಣದಲ್ಲಿ ಸೇನೆಯ ನಿಯೋಜನೆ ಈ ಅಭ್ಯಾಸದಲ್ಲಿ ನಡೆಯಲಿದೆ ಎಂದು ಚೀನಾದ ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಏಷ್ಯಾ–ಫೆಸಿಫಿಕ್‌ ವಲಯದಲ್ಲಿ ಚೀನಾ ತನ್ನ ಸೇನಾ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ. ಇದು, ಅಮೆರಿಕ ಮತ್ತು ಮೈತ್ರಿ ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಜಗತ್ತಿನ ಎರಡು ಬಲಿಷ್ಠ ಆರ್ಥಿಕತೆಯ ದೇಶಗಳ ನಡುವೆ ಸ್ಪರ್ಧೆ ಹೆಚ್ಚುತ್ತಿರುವ ಸೂಚನೆ ನೀಡಿದೆ.

ADVERTISEMENT

ಅಮೆರಿಕದ ರಕ್ಷಣಾ ಇಲಾಖೆಯ ಲಾಯ್ಡ್‌ ಆಸ್ಟಿನ್‌ ಅವರೂ ಕಳೆದ ಜೂನ್‌ ತಿಂಗಳಿನಲ್ಲಿ ಥಾಯ್ಲೆಂಡ್‌ಗೆ ಭೇಟಿ ನೀಡಿದ್ದು, ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.