ADVERTISEMENT

ತೈವಾನ್‌ ಸುತ್ತ ಚೀನಾದ ದಾಳಿ ತಾಲೀಮು

ರಾಯಿಟರ್ಸ್
Published 25 ಡಿಸೆಂಬರ್ 2022, 16:06 IST
Last Updated 25 ಡಿಸೆಂಬರ್ 2022, 16:06 IST
   

ಬೀಜಿಂಗ್‌/ತೈಪೈ:ತೈವಾನ್‌ ಸುತ್ತಲಿನ ಸಮುದ್ರ ಮತ್ತು ಆಕಾಶದಲ್ಲಿ ಚೀನಾ ಮಿಲಿಟರಿ ಭಾನುವಾರ ದಾಳಿಯ ತಾಲೀಮನ್ನು ನಡೆಸಿದೆ. ಪ್ರಜಾಸತಾತ್ಮಕ ಆಡಳಿತ ನಡೆಸುತ್ತಿರುವ ಐಸ್‌ಲ್ಯಾಂಡ್‌ ಮತ್ತು ಅಮೆರಿಕದ ಪ್ರಜೋದನೆಯಿಂದಾಗಿ ಈ ತಾಲೀಮು ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ತೈವಾನ್‌ ತನ್ನ ಸ್ವಂತ ಪ್ರದೇಶವೆಂದು ಹೇಳಿಕೊಳ್ಳುವ ಚೀನಾ ತೈವಾನ್‌ನ ಪ್ರಾದೇಶಿಕ ಶಾಂತಿಯನ್ನು ನಾಶಪಡಿಸುತ್ತಿದೆ ಮತ್ತು ತೈವಾನ್‌ನ ಜನರನ್ನು ಹೆದರಿಸಲು ತಾಲೀಮು ನಡೆಸುತ್ತಿರುವಂತೆ ಕಂಡುಬರುತ್ತಿದೆ ಎಂದು ತೈವಾನ್‌ ಹೇಳಿದೆ.

ಅಮೆರಿಕದ ಹೌಸ್‌ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ನಂತರ ಆಗಸ್ಟ್‌ನಲ್ಲಿ ಚೀನಾ ಯುದ್ಧ ತಂತ್ರಗಳನ್ನು ಆರಂಭಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.