ADVERTISEMENT

ಚೀನಾ: ಮೂರು ಸೂಕ್ಷ್ಮ ಸಂವೇದಿ ಉಪಗ್ರಹಗಳ ಯಶಸ್ವಿ ಉಡಾವಣೆ

ಪಿಟಿಐ
Published 6 ನವೆಂಬರ್ 2021, 8:23 IST
Last Updated 6 ನವೆಂಬರ್ 2021, 8:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌: ಚೀನಾದ ನೈರುತ್ಯ ಸಿಚುವಾನ್ ಪ್ರಾಂತ್ಯದಲ್ಲಿರುವ ಕ್ಸಿಚಾಂಗ್‌ ಉಪಗ್ರಹ ಉಡಾವಣಾ ಕೇಂದ್ರದಿಂದಮೂರು ಸೂಕ್ಷ್ಮಸಂವೇದಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ಯಾವೋಗನ್ -35’ ಸರಣಿಗೆ ಸೇರಿದ ಈ ಉಪಗ್ರಹಗಳನ್ನು ‘ಲಾಂಗ್ ಮಾರ್ಚ್ -2 ಡಿ ಕ್ಯಾರಿಯರ್ ರಾಕೆಟ್‘ ಮೂಲಕ ಉಡಾವಣೆ ಮಾಡಲಾಯಿತು. ಈ ಉಪಗ್ರಹಗಳು ಯೋಜಿತ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿವೆ‘ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ. ಲಾಂಗ್ ಮಾರ್ಚ್ ಸರಣಿಯ ಕ್ಯಾರಿಯರ್‌ ರಾಕೆಟ್‌ಗಳ ಮೂಲಕ ನೆರವೇರಿಸಿದ 396ನೇ ಉಡಾವಣೆ ಇದಾಗಿದೆ.

2019ರ ಮಾರ್ಚ್‌ನಲ್ಲಿ ಈ ಸರಣಿಯ ‘ಲಾಂಗ್ ಮಾರ್ಚ್ 3 ಬಿ ರಾಕೆಟ್’ ಹೊಸ ಸಂವಹನ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೂಲಕ 300ನೇ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.