ADVERTISEMENT

ಚೀನಾದಿಂದ ನೂತನ ಉಪಗ್ರಹ ಉಡಾವಣೆ

ಪಿಟಿಐ
Published 6 ಡಿಸೆಂಬರ್ 2020, 12:31 IST
Last Updated 6 ಡಿಸೆಂಬರ್ 2020, 12:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌: ಭೂಮಿಯ ಮೇಲ್ಮೈಯ ಚಿತ್ರಗಳನ್ನು ಹೆಚ್ಚು ನಿಖರವಾಗಿ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿರುವ ಹೊಸ ಉಪಗ್ರಹವನ್ನು ಚೀನಾ ಭಾನುವಾರ ಯಶಸ್ವಿಯಾಗಿ ಉಡಾವಣೆ ಮಾಡಿತು.

ನೈರುತ್ಯ ಚೀನಾದ ಸಿಚುವಾನ್‌ ಪ್ರಾಂತ್ಯದಲ್ಲಿರುವ ಷಿಚಾಂಗ್‌ ಉಪಗ್ರಹ ಉಡ್ಡಯನ ಕೇಂದ್ರದಿಂದ ಈ ಉಪಗ್ರಹವನ್ನು ಭೂ ಸ್ಥಿರ ಕಕ್ಷೆಗೆ ಉಡಾವಣೆ ಮಾಡಲಾಯಿತು ಎಂದು ಷಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ಜಿಯೊಫೆನ್‌–14’ ಹೆಸರಿನ ಉಪಗ್ರಹವನ್ನು ಲಾಂಗ್‌ ಮಾರ್ಚ್‌– 3ಬಿ ರಾಕೆಟ್‌ ಬಳಸಿ ಉಡಾವಣೆ ಮಾಡಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.