ADVERTISEMENT

ಕೊರೊನಾ ಸೋಂಕಿನ ಹೊಸ ಪ್ರಕರಣ: ಚೀನಾದ ಕ್ವಿಂಗ್‌ಡಾವೊದ ಎಲ್ಲ ನಿವಾಸಿಗಳಿಗೆ ಪರೀಕ್ಷೆ

ಏಜೆನ್ಸೀಸ್
Published 12 ಅಕ್ಟೋಬರ್ 2020, 5:29 IST
Last Updated 12 ಅಕ್ಟೋಬರ್ 2020, 5:29 IST
   

ಬೀಜಿಂಗ್: ಹೊಸದಾಗಿ ಕೊರೊನಾ ಸೋಂಕಿನ ಆರು ಪ್ರಕರಣಗಳು ಪತ್ತೆಯಾದ ಹಿಂದೆಯೇ, ಇಲ್ಲಿನ ಕ್ವಿಂಗ್‌ಡಾವೊದ ಎಲ್ಲ ನಿವಾಸಿಗಳಿಗೆ ಐದು ದಿನಗಳ ಅವಧಿಯಲ್ಲಿ ಕೊರೊನಾ ಸೋಂಕು ಪತ್ತೆ ತಪಾಸಣೆಯನ್ನು ನಡೆಸಲು ಚೀನಾ ನಿರ್ಧರಿಸಿದೆ.

ಕೊರೊನಾ ಸೋಂಕು ಮೊದಲಿಗೆ ಚೀನಾದಲ್ಲಿಯೇ ಕಾಣಿಸಿಕೊಂಡಿದ್ದು, ಹಿಂದೆಯೇ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಸದ್ಯ, ವಿಶ್ವದ ಇತರೆ ದೇಶಗಳಲ್ಲಿ ಸೋಂಕಿನ ಪರಿಣಾಮ ಇನ್ನೂ ವ್ಯಕ್ತವಾಗುತ್ತಿದ್ದು, ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ.

ಒಟ್ಟು 94 ಲಕ್ಷ ಜನಸಂಖ್ಯೆಯಿರುವ ಕ್ವಿಂಗ್‌ಡಾವೊದಲ್ಲಿ ಭಾನುವಾರ ಆರು ಪ್ರಕರಣಗಳು ಪತ್ತೆಯಾಗಿವೆ ಎಂದು ಸ್ಥಳೀಯ ಸಂಸ್ಥೆಯ ಆರೋಗ್ಯ ಆಯೋಗದ ಹೇಳಿಕೆ ತಿಳಿಸಿದೆ.

ADVERTISEMENT

ಮೂರು ದಿನಗಳಲ್ಲಿ ಐದು ಜಿಲ್ಲೆಗಳಲ್ಲಿ ತಪಾಸಣೆ ಪ್ರಕ್ರಿಯೆ ನಡೆಯಲಿದೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಎಷ್ಟು ಜನರಿಗೆ ಪರೀಕ್ಷೆ ನಡೆಯಲಿದೆ ಎಂಬ ವಿವರಗಳನ್ನು ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.