ADVERTISEMENT

ವುಹಾನ್‌ನಲ್ಲಿ ಶೇ 50 ರಷ್ಟು ಸಾವಿನ ಸಂಖ್ಯೆ ಏರಿಕೆ ಮಾಡಿ ಪ್ರಕಟಣೆ ಹೊರಡಿಸಿದ ಚೀನಾ

ಏಜೆನ್ಸೀಸ್
Published 17 ಏಪ್ರಿಲ್ 2020, 8:02 IST
Last Updated 17 ಏಪ್ರಿಲ್ 2020, 8:02 IST
ಪ್ರಾತಿನಿಧಿಕ ಚಿತ್ರ (ಚಿತ್ರ ಕೃಪೆ: ಎಪಿ)
ಪ್ರಾತಿನಿಧಿಕ ಚಿತ್ರ (ಚಿತ್ರ ಕೃಪೆ: ಎಪಿ)   

ವುಹಾನ್‌: ಚೀನಾದಲ್ಲಿ ಕೋವಿಡ್‌–19ಗೆ ಬಲಿಯಾದವರ ಸಂಖ್ಯೆ ಬಗ್ಗೆ ಜಾಗತಿಕಮಟ್ಟದಲ್ಲಿ ಅನುಮಾನಗಳು ವ್ಯಕ್ತವಾದ ಬೆನ್ನಲೇ 4632 ಜನರು ಮೃತಪಟ್ಟಿದ್ದಾರೆ ಎಂದು ಶುಕ್ರವಾರ ಚೀನಾ ಹೇಳಿದೆ. ಈ ಹಿಂದೆ 3342 ಜನರು ಮೃತಪಟ್ಟಿದ್ದರು ಎಂದು ಚೀನಾ ಹೇಳಿತ್ತು.

ಗುರುವಾರದ ಅಂಕಿ ಅಂಶಗಳ ಪ್ರಕಾರ ಚೀನಾದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 3342. ಶುಕ್ರವಾರ ಪರಿಷ್ಕೃತ ಅಂಕಿಅಂಶ ಬಿಡುಗಡೆಮಾಡಿದ್ದು ದೇಶದಾದ್ಯಂತ ಸಾವಿನ ಸಂಖ್ಯೆ ಪ್ರಮಾಣವನ್ನು ಶೇ.39 ರಷ್ಟು ಹೆಚ್ಚಿಸಿ, ಕೋವಿಡ್‌–19ಗೆ ಒಟ್ಟು 4632 ಜನರು ಬಲಿಯಾಗಿದ್ದಾರೆ ಎಂದು ಹೇಳಿದೆ.

ಕೊರೊನಾ ವೈರಸ್‌ ಹುಟ್ಟಿದ ವುಹಾನ್‌ ನಗರದಲ್ಲಿ ಸಾವಿನ ಸಂಖ್ಯೆಯಲ್ಲಿ ಶೇ. 50ರಷ್ಟು ಏರಿಕೆಯಾಗಿದ್ದು 3869 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಚೀನಾ ಹೇಳಿದೆ. ಮತ್ತೆ ಹೊಸದಾಗಿ 1290ಸಾವಿನಪ್ರಕರಣಗಳನ್ನು ಸೇರಿಸಲಾಗಿದೆ.

ADVERTISEMENT

ಕೆಲವು ಸಾವಿನ ಪ್ರಕರಣಗಳು ದಾಖಲಾಗಿರಲಿಲ್ಲ, ಮನೆಗಳಲ್ಲಿ ಮೃತಪಟ್ಟ ಪ್ರಕರಣಗಳು ಲೆಕ್ಕಕ್ಕೆ ಸಿಕ್ಕಿರಲಿಲ್ಲ. ವೈರಸ್‌ ಸೋಂಕಿನ ಆರಂಭಿಕ ದಿನಗಳಲ್ಲಿ ವೈದ್ಯರು ಚಿಕಿತ್ಸೆಯಲ್ಲಿ ಮುಳುಗಿದ್ದರಿಂದ ಪ್ರಕರಣಗಳು ಸರಿಯಾಗಿ ದಾಖಲಾಗಿರಲಿಲ್ಲ ಎಂದು ಹೊಸ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಬಳಿಕ ಚೀನಾ ತಿಳಿಸಿದೆ.

ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಚೀನಾದ ಪಾರದರ್ಶಕತೆ ಮೇಲೆ ಅನುಮಾನಗಳು ವ್ಯಕ್ತವಾಗಿವೆ. ಕೊರೊನಾ ವೈರಸ್‌ ವುಹಾನ್‌ ಪ್ರಯೋಗಾಲಯದಲ್ಲಿ ಹುಟ್ಟಿದೆಯೇ ಎಂಬ ಪ್ರಶ್ನೆಗಳು ಮೂಡಿವೆ. ಕೊರೊನಾ ವೈರಸ್‌ ವುಹಾನ್‌ನ ಕಾಡು ಪ್ರಾಣಿಗಳ ಮಾಂಸದಿಂದ ಮನುಷ್ಯರಿಗೆ ಸೋಂಕಿದೆ ಎಂದು ಚೀನಾ ಹೇಳಿದೆ.

ಆಧುನಿಕವಾಗಿ ನಿರ್ಮಾಣಗೊಂಡಿರುವ ವುಹಾನ್‌ ನಗರ ಪ್ರಮುಖ ಪ್ರವಾಸಿ ಸ್ಥಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.