ADVERTISEMENT

ಶ್ರೀಲಂಕಾ ನೆರವಿಗೆ ನಿಲ್ಲಲು ಚೀನಾ, ಅಮೆರಿಕ ನಿರ್ಧಾರ

ಶ್ರೀಲಂಕಾದಲ್ಲಿರುವ ಚೀನಾ ರಾಯಭಾರ ಕಚೇರಿಯಲ್ಲಿ ಉಭಯ ದೇಶಗಳ ಪ್ರತಿನಿಧಿಗಳ ಮಹತ್ವದ ಸಭೆ

ಏಜೆನ್ಸೀಸ್
Published 13 ಜೂನ್ 2022, 14:22 IST
Last Updated 13 ಜೂನ್ 2022, 14:22 IST
ಸಾಂದರ್ಭಿಕ ಚಿತ್ರ –ಎಎಫ್‌ಪಿ
ಸಾಂದರ್ಭಿಕ ಚಿತ್ರ –ಎಎಫ್‌ಪಿ   

ಕೊಲಂಬೊ (ಎಪಿ): ಚೀನಾದ ಶ್ರೀಲಂಕಾ ರಾಯಭಾರಿ ಕಿ ಝೆನ್‌ಹಾಂಗ್ ಮತ್ತು ಅಮೆರಿಕದ ಶ್ರೀಲಂಕಾ ರಾಯಭಾರಿ ಜೂಲಿ ಚುಂಗ್‌ ಅವರು ಸೋಮವಾರ ಭೇಟಿಯಾಗಿ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾಗೆ ನೆರವು ನೀಡುವ ಬಗ್ಗೆ ಮಾತುಕತೆ ನಡೆಸಿದರು.

‘ಚೀನಾ ರಾಯಭಾರ ಕಚೇರಿಯಲ್ಲಿ ಕಿ ಝೆನ್‌ಹಾಂಗ್ ಮತ್ತು ಜೂಲಿಚುಂಗ್‌ ಅವರು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಚೀನಾ ಮತ್ತು ಅಮೆರಿಕ ಜಂಟಿಯಾಗಿ ಸಹಕಾರ ನೀಡಲು ನಿರ್ಧರಿಸಲಾಗಿದೆ’ ಎಂದು ಶ್ರೀಲಂಕಾದ ಚೀನಾ ರಾಯಭಾರ ಕಚೇರಿ ಟ್ವೀಟ್‌ ಮಾಡಿದೆ.

ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದ್ದು, ದೇಶದಲ್ಲಿ ಆಹಾರ, ಔಷಧ, ಅಡುಗೆ ಅನಿಲ, ತೈಲ ಸೇರಿದಂತೆ ಅಗತ್ಯಗಳ ತೀವ್ರ ಅಭಾವ ಸೃಷ್ಟಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.