ADVERTISEMENT

ವುಹಾನ್‌ ಪ್ರಕರಣದ ವರದಿ ಮಾಡಿದ್ದ ನಾಗರಿಕ ಪತ್ರಕರ್ತೆಗೆ ನಾಲ್ಕ ವರ್ಷ ಜೈಲುಶಿಕ್ಷೆ

ಏಜೆನ್ಸೀಸ್
Published 28 ಡಿಸೆಂಬರ್ 2020, 7:21 IST
Last Updated 28 ಡಿಸೆಂಬರ್ 2020, 7:21 IST
 ಝಾಂಗ್‌ ಝಾನ್ (ಟ್ವಿಟರ್‌ ಚಿತ್ರ- @YaxueCao)
 ಝಾಂಗ್‌ ಝಾನ್ (ಟ್ವಿಟರ್‌ ಚಿತ್ರ- @YaxueCao)   

ಶಾಂಘೈ: ವುಹಾನ್‌ ನಗರದಲ್ಲಿ ‘ಕೋವಿಡ್‌ 19‘ ಸಾಂಕ್ರಾಮಿಕ ರೋಗ ಹರಡುವುದನ್ನು ನೇರವಾಗಿ ವರದಿ ಮಾಡಿದ್ದ ನಾಗರಿಕ ಪತ್ರಕರ್ತೆಯೊಬ್ಬರಿಗೆ ಶಾಂಘೈ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮಾಜಿ ವಕೀಲೆಝಾಂಗ್‌ ಝಾನ್‌, ಜೈಲು ಶಿಕ್ಷೆಗೆ ಗುರಿಯಾದ ಪತ್ರಕರ್ತೆ. ‘ಸಂಘರ್ಷವನ್ನು ಪ್ರೋತ್ಸಾಹಿಸಿ ಮತ್ತು ತೊಂದರೆ ಉಂಟುಮಾಡಿದ‘ ಆರೋಪದ ಮೇಲೆ ಶಾಂಘೈ ನ್ಯಾಯಾಲಯ, ಝಾಂಗ್‌ಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ವುಹಾನ್‌ ನಗರದ ಕೋವಿಡ್‌ 19 ಸಾಂಕ್ರಾಮಿಕ ರೋಗದ ಕುರಿತು ಝಾಂಗ್ ಮಾಡುತ್ತಿದ್ದ ಲೈವ್ ವರದಿಗಳು, ಫೆಬ್ರುವರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹಂಚಿಕೆಯಾಗುತ್ತಿದ್ದವು. ಇದು ಅಧಿಕಾರಿಗಳ ಗಮನ ಸೆಳೆಯಿತು. ಇಲ್ಲಿವರೆಗೆ ಸರ್ಕಾರ, ಎಂಟು ಮಂದಿಗೆ ಶಿಕ್ಷೆ ವಿಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.