AI Image
ಬೀಜಿಂಗ್: ವೈರಾಣುಗಳ ಬಗ್ಗೆ ಅಧ್ಯಯನ ನಡೆಸುವ ಚೀನಾದ ವಿಜ್ಞಾನಿಗಳ ತಂಡವು ಬಾವಲಿಗಳಲ್ಲಿ ಕಂಡುಬರುವ ಹೊಸ ವೈರಾಣುವನ್ನು ಪತ್ತೆಹಚ್ಚಿದೆ.
ಕೋವಿಡ್ 19 ಸಾಂಕ್ರಾಮಿಕಕ್ಕೆ ಕಾರಣವಾಗಿದ್ದ ವೈರಾಣುವಿನಂತೆಯೇ ಇರುವ ಈ ಕೊರೊನಾ ವೈರಸ್, ಪ್ರಾಣಿಯಿಂದ ಮನುಷ್ಯರಿಗೆ ಹರಡುವ ಅಪಾಯವಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಕೋವಿಡ್ ಹರಡಿದ್ದ ವೈರಾಣುವಿನಂತೆಯೇ ಇದು ಕೂಡಾ ಮಾನವ ಜೀವಕೋಶಗಳಿಗೆ ಸುಲಭವಾಗಿ ನುಸುಳಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ಪ್ರಯೋಗಾಲಯದ ಷಿ ಝೆಂಗ್‌ಲಿ ನೇತೃತ್ವದ ತಂಡವು ನಡೆಸಿದ ಅಧ್ಯಯನದಲ್ಲಿ ಈ ವೈರಾಣು ಪತ್ತೆಯಾಗಿದೆ.
ಕೋವಿಡ್–19 ಸಾಂಕ್ರಾಮಿಕಕ್ಕೆ ಕಾರಣವಾಗಿರುವ ವೈರಾಣು ಚೀನಾದ ಇದೇ ಪ್ರಯೋಗಾಲಯದಿಂದ ಹೊರಬಿದ್ದಿದೆ ಎಂಬ ಆರೋಪ ಕೇಳಿಬಂದಿತ್ತು. ಬಾವಲಿಗಳಿಂದ ಬರುವ ವೈರಾಣುಗಳ ಕುರಿತ ತಮ್ಮ ಸಂಶೋಧನೆಗಾಗಿ ‘ಬ್ಯಾಟ್ ವುಮನ್’ ಎಂದೇ ಹೆಸರುವಾಸಿಯಾಗಿರುವ ಷಿ ಅವರು ಈ ಆರೋಪವನ್ನು ಅಲ್ಲಗಳೆದಿದ್ದರು. ಚೀನಾ ಸರ್ಕಾರವೂ ಆರೋಪವನ್ನು ಅಲ್ಲಗಳೆದಿತ್ತು.
ಇದೀಗ ಪತ್ತೆಯಾಗಿರುವ ‘ಎಚ್‌ಕೆಯು5-ಕೊರೊನಾ ವೈರಸ್–2’, ಕೊರೊನಾ ವೈರಸ್‌ನ ಹೊಸ ತಳಿಯಾಗಿದ್ದು ಹಾಂಕಾಂಗ್‌ನಲ್ಲಿರುವ ‘ಜಪಾನೀಸ್ ಪಿಪಿಸ್ಟ್ರೆಲ್’ ಬಾವಲಿಯಲ್ಲಿ ಮೊದಲು ಗುರುತಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.