ADVERTISEMENT

ಮನಿಲಾ: 6 ಸೈನಿಕರ ಹತ್ಯೆ

ಏಜೆನ್ಸೀಸ್
Published 12 ನವೆಂಬರ್ 2019, 19:46 IST
Last Updated 12 ನವೆಂಬರ್ 2019, 19:46 IST

ಮನಿಲಾ: ಕಮ್ಯುನಿಸ್ಟ್‌ ಬಂಡಾಯಗಾರರು ಆರು ಫಿಲಿಪ್ಪೀನ್ಸ್‌ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ 20 ಸೈನಿಕರಿಗೆ ಗಾಯಗಳಾಗಿವೆ ಎಂದು ಮಂಗಳವಾರ ಸೇನೆ ತಿಳಿಸಿದೆ.

ದೇಶದಲ್ಲಿನ 50 ವರ್ಷ ಇತಿಹಾಸದ ಮಾವೋ ದಂಗೆಯಲ್ಲಿ ಈ ಘಟನೆ ಮಾರಕವಾದ ದಾಳಿಗಳಲ್ಲಿ ಒಂದಾಗಿದೆ.

‘ಸೋಮವಾರ, ಸಮಾರ್‌ನ ಪೂರ್ವ ದ್ವೀಪದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಬಾಂಬ್‌ ಸಿಡಿಸಿದ್ದು, ಸುಮಾರು 30 ನಿಮಿಷ ಸೈನಿಕರು ಹಾಗೂ ಬಂಡಾಯಗಾರರ ನಡುವೆ ಗುಂಡಿನ ಚಕಮಕಿ ನಡೆದಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.