ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರೊಬ್ಬರು ಮೂರನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಅವಕಾಶ ಕಲ್ಪಿಸುವ ಕುರಿತು ಸಂವಿಧಾನಕ್ಕೆ ತಿದ್ದುಪಡಿ ತರುವುದಕ್ಕೆ ಸಂಬಂಧಿಸಿದ ಜಂಟಿ ಸದನ ನಿರ್ಣಯವೊಂದನ್ನು ರಿಪಬ್ಲಿಕನ್ ಸಂಸದರೊಬ್ಬರು ಮಂಡಿಸಿದ್ದಾರೆ.
ಈ ನಿರ್ಣಯವು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೂರನೇ ಅವಧಿಗೆ ಆಯ್ಕೆಯಾಗುವುದಕ್ಕೆ ನೆರವಾಗುವ ಉದ್ದೇಶ ಹೊಂದಿದೆ.
ನಿರ್ಣಯ ಮಂಡಿಸಿರುವ ಸಂಸದ ಆ್ಯಂಡಿ ಒಗ್ಲೆಸ್,‘ಈ ತಿದ್ದುಪಡಿಯು ಅಧ್ಯಕ್ಷ ಟ್ರಂಪ್ ಅವರು ಮೂರನೇ ಅವಧಿಗೆ ದೇಶದ ಸೇವೆ ಮಾಡಲು ಅವಕಾಶ ಒದಗಿಸಲಿದೆ. ದೇಶಕ್ಕೆ ದಿಟ್ಟ ನಾಯಕತ್ವ ಕೊಡಲು ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.
‘ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಟ್ರಂಪ್ ಅವರು ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಹಿಂದಿನ ಅಧ್ಯಕ್ಷ ಜೋ ಬೈಡನ್ ಜಾರಿಗೊಳಿಸಿದ್ದ ವಿನಾಶಕಾರಿ ನೀತಿಗಳನ್ನು ರದ್ದು ಮಾಡಿರುವ ಟ್ರಂಪ್, ಅಮೆರಿಕವನ್ನು ಅಭಿವೃದ್ಧಿ ಮತ್ತು ಸಶಕ್ತ ರಾಷ್ಟ್ರವಾಗುವ ಪಥಕ್ಕೆ ಮತ್ತೆ ಮರಳಿ ತಂದಿದ್ದಾರೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.