ADVERTISEMENT

ಕ್ಯಾಲಿಫೋರ್ನಿಯಾ ಸೆನೆಟ್‌ ಸ್ಥಾನಕ್ಕೆ ಭಾರತ ಮೂಲದ ರೋ ಖನ್ನಾ ಅಭ್ಯರ್ಥಿ?

ಪಿಟಿಐ
Published 13 ನವೆಂಬರ್ 2020, 6:16 IST
Last Updated 13 ನವೆಂಬರ್ 2020, 6:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆಯಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್ ಅವರಿಂದ ತೆರವಾಗುವ ಕ್ಯಾಲಿಫೋರ್ನಿಯಾ ರಾಜ್ಯದ ಸೆನೆಟ್‌ ಸ್ಥಾನಕ್ಕೆ ಭಾರತ ಸಂಜಾತ ಅಮೆರಿಕ ಪ್ರಜೆ ಕಾಂಗ್ರೆಸ್ಸಿಗ ರೋ ಖನ್ನಾ ಅವರನ್ನು ಸಂಭಾವ್ಯ ಅಭ್ಯರ್ಥಿಯಾಗಿ ಪರಿಗಣಿಸುವ ಸಾಧ್ಯತೆ ಇದೆ.

ಸಿಲಿಕಾನ್ ವ್ಯಾಲಿ ಪ್ರತಿನಿಧಿಸುವ ಖನ್ನಾ, ಇದೇ ಜಿಲ್ಲೆಯಿಂದ ಮೂರು ಬಾರಿ ನಿರಂತರವಾಗಿ ಚುನಾಯಿತರಾಗಿದ್ದಾರೆ.

ಕಮಲಾ ಅವರು 2016ರಲ್ಲಿ ಕ್ಯಾಲಿಫೋರ್ನಿಯಾದಿಂದ ಅಮೆರಿಕದ ಸೆನಟರ್‌ ಆಗಿ ಆಯ್ಕೆಯಾಗಿದ್ದರು. ಜನವರಿಯಲ್ಲಿ ಕಮಲಾ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದೆ. ಇದೇ ಅವಧಿಯಲ್ಲಿ ಅವರು ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಂತರವೇ ಚುನಾವಣೆ ಪ್ರಕ್ರಿಯೆ ನಡೆಯಲಿದೆ.

ADVERTISEMENT

ಕ್ಯಾಲಿಫೋರ್ನಿಯಾದ ಕಾನೂನಿನ ಪ್ರಕಾರ, ಗರ್ವನರ್‌ ಗವಿನ್ ನ್ಯೂಸಮ್ ಅವರು ತೆರವಾದ ಸ್ಥಾನಗಳಿಗೆ ಉಳಿದಿರುವ ಎರಡು ವರ್ಷಗಳ ಅವಧಿಗೆ ಪ್ರತಿನಿಧಿಗಳನ್ನು ಭರ್ತಿ ಮಾಡಬೇಕಿದೆ. ಮಾಧ್ಯಮಗಳು ಖನ್ನಾ ಸೇರಿದಂತೆ ಹಲವು ಹೆಸರುಗಳನ್ನು ಉಲ್ಲೇಖಿಸಿ ವರದಿ ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.