ADVERTISEMENT

ಕೊರೊನಾ ವಾಹಕಗಳನ್ನೆಲಾದ ಪ್ರಾಣಿಗಳನ್ನು ವುಹಾನ್‌ನಲ್ಲಿ ಮಾರಲಾಗುತ್ತಿತ್ತು: ಅಧ್ಯಯನ

ಐಎಎನ್ಎಸ್
Published 18 ಆಗಸ್ಟ್ 2021, 16:55 IST
Last Updated 18 ಆಗಸ್ಟ್ 2021, 16:55 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ಲಂಡನ್: ಕೊರೊನಾ ವೈರಸ್‌ನ ವಾಹಕಗಳು ಎಂದು ಕರೆಯಲ್ಪಡುವ ಪ್ರಾಣಿಗಳನ್ನು ಚೀನಾದ ವುಹಾನ್‌ನ ಮಾರುಕಟ್ಟೆಗಳಲ್ಲಿ ಹಲವು ವರ್ಷಗಳಿಂದ ಮಾರಾಟ ಮಾಡಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿರುವ ಸಂಶೋಧಕರು, ಕೋವಿಡ್ 19, ಪ್ರಾಣಿಗಳಿಂದ ಮನುಷ್ಯರಿಗೆ ವೈರಸ್ ಹಾರಿದ ಪರಿಣಾಮ ಉಂಟಾದ ರೋಗ ಎಂಬ ಸಿದ್ಧಾಂತಕ್ಕೆ ಹೊಸ ಅಧ್ಯಯನದ ಮೂಲಕ ಇಂಬು ನೀಡಿದ್ದಾರೆ.

ನೈರುತ್ಯ ಚೀನಾದ ವನ್ಯಜೀವಿ ಸಂಪನ್ಮೂಲಗಳ ಸಂರಕ್ಷಣೆಯ ಪ್ರಮುಖ ಪ್ರಯೋಗಾಲಯ ಹಾಗೂ ಬ್ರಿಟನ್ನಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು, ವುಹಾನ್‌ನ ಹಲವು ಮಾರುಕಟ್ಟೆಗಳಿಂದ ಡೇಟಾವನ್ನು ಸಂಗ್ರಹಿಸಿದ್ದಾರೆ. ವುಹಾನ್‌ನ ಸಮುದ್ರಾಹಾರ ಮಾರುಕಟ್ಟೆಯಿಂದ ಛಾಯಾಚಿತ್ರಗಳನ್ನು ಸಂಗ್ರಹಿಸಲಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರಕಟವಾಗದೇ ಉಳಿದಿದ್ದ ಅಧ್ಯಯನವನ್ನು ಈಗ ಸೈಂಟಿಫಿಕ್ ರಿಪೋರ್ಟ್ಸ್‌ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ADVERTISEMENT

ವುಹಾನ್‌ನ ಮಾರುಕಟ್ಟೆಗಳಿಂದ 38 ಜಾತಿಯ 47,381 ಪ್ರಾಣಿಗಳ ಮಾಹಿತಿಯನ್ನು ಸಂಶೋಧಕರು ಸಂಗ್ರಹಿಸಿದ್ದಾರೆ. ಇದರಲ್ಲಿ ಮೇ 2017ರಿಂದ ನವೆಂಬರ್ 2019 ರ ನಡುವೆ ಮಾರಾಟವಾದ 31 ಸಂರಕ್ಷಿತ ಪ್ರಾಣಿಗಳ ಜಾತಿಗಳು ಸೇರಿವೆ. ಇದರಲ್ಲಿ ಸಿವೆಟ್ಸ್, ನಾಯಿಗಳು, ಮಿಂಕ್ಸ್, ರಕೂನ್ ಮುಂತಾದ ಪ್ರಾಣಿಗಳೂ ಸೇರಿವೆ.

ಮಾರಾಟಕ್ಕೆ ಮುಂಚಿತವಾಗಿ ಪ್ರಾಣಿಗಳನ್ನು ಕಳಪೆ ಸ್ಥಿತಿಯಲ್ಲಿ ಇರಿಸಲಾಗಿತ್ತು ಎಂಬುದನ್ನು ತಂಡವು ಕಂಡುಕೊಂಡಿತು’

‘ಪ್ಯಾಂಗೋಲಿನ್‌ಗಳನ್ನು ಅಲ್ಲಿ ಮಾರಾಟ ಮಾಡಲಾಗುತ್ತಿರಲಿಲ್ಲ. ಪ್ಯಾಂಗೋಲಿನ್‌ಗಳು ಕೊರೊನಾ ಸಾಂಕ್ರಾಮಿಕ ರೋಗದ ಹೋಸ್ಟ್ ಆಗಿಲ್ಲ’ ಎಂದು ನಾವು ಗಮನಿಸಿರುವುದಾಗಿ ನೈರುತ್ಯ ಚೀನಾದ ವನ್ಯಜೀವಿ ಸಂಪನ್ಮೂಲಗಳ ಸಂರಕ್ಷಣೆಯ ಪ್ರಯೋಗಾಲಯದ ಸಂಶೋಧಕರು ಹೇಳಿದ್ದಾರೆ.

‘ಕೋವಿಡ್ 19ರ ಹರಡುವಿಕೆಯ ಮೂಲಗಳ ಕುರಿತಾದ ತಪ್ಪಾದ ಸುದ್ದಿ ಹರಡುವಿಕೆ ಬಗ್ಗೆ ನಾವು ಸಂಶೋಧಿಸುವಾಗ, ವುಹಾನ್‌ನಲ್ಲಿ ಮಾರಾಟದಲ್ಲಿರುವ ಕಾಡು ಪ್ರಾಣಿಗಳ ಕಳಪೆ ನಿರ್ವಹಣೆ ಮತ್ತು ಅಶುಚಿತ್ವದ ವಾತಾವರಣ ಕಂಡುಬಂದಿದೆ. ಅವುಗಳು ಸಂಭಾವ್ಯ ಕೊರೊನಾ ವಾಹಕಗಳಾಗಿರಬಹುಹು’ಎಂದು ಸಂಶೋಧಕರು ಹೇಳಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ, ಕೋವಿಡ್ -19 ಸಾಂಕ್ರಾಮಿಕ ರೋಗವು ಕೊನೆಗೊಳ್ಳುವವರೆಗೆ ಚೀನಾ ದೇಶವು 2020ರ ಜನವರಿಯಲ್ಲಿ ಎಲ್ಲಾ ವನ್ಯಜೀವಿ ವ್ಯಾಪಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು. ಫೆಬ್ರವರಿಯಲ್ಲಿ ಆಹಾರಕ್ಕಾಗಿ ಕಾಡುಪ್ರಾಣಿಗಳನ್ನು ಬಳಸುವುದು ಮತ್ತು ವ್ಯಾಪಾರ ಮಾಡುವುದನ್ನು ಶಾಶ್ವತವಾಗಿ ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.