ADVERTISEMENT

Covid-19 World Update: 2.5 ಕೋಟಿಯತ್ತ ಸಾಗಿದ ಕೋವಿಡ್–19 ಪ್ರಕರಣ ಸಂಖ್ಯೆ

ಏಜೆನ್ಸೀಸ್
Published 30 ಆಗಸ್ಟ್ 2020, 4:28 IST
Last Updated 30 ಆಗಸ್ಟ್ 2020, 4:28 IST
   

ನ್ಯೂಯಾರ್ಕ್‌:ಜಗತ್ತಿನಾದ್ಯಂತ ಕೋವಿಡ್–19 ಸೋಂಕು ಪ್ರಕರಣಗಳ ಸಂಖ್ಯೆ2.5 ಕೋಟಿಯತ್ತ ಸಾಗಿದೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾವೈರಸ್‌ಸಂಪನ್ಮೂಲಕೇಂದ್ರ ತಿಳಿಸಿದೆ.

ಇದುವರೆಗೆ ಒಟ್ಟು2,47,76,988 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ8,37,979 ಮಂದಿ ಮೃತಪಟ್ಟಿದ್ದು,1,62,27,851 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ77,11,158 ಜನರಿಗೆ ಚಿಕಿತ್ಸೆ ಮುಂದುವರಿದಿದೆ.

ಭಾರತದಲ್ಲಿ 34 ಲಕ್ಷ ಪ್ರಕರಣ
ಹೆಚ್ಚು ಪ್ರಕರಣಗಳು ಕಾಣಿಸಿಕೊಂಡ ರಾಷ್ಟ್ರಗಳ ಸಾಲಿನಲ್ಲಿಅಮೆರಿಕ ಮತ್ತು ಬ್ರೆಜಿಲ್‌ ಬಳಿಕ ಮೂರನೇ ಸ್ಥಾನದಲ್ಲಿರುವುದು ಭಾರತ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ದೇಶದಲ್ಲಿ ಆಗಸ್ಟ್‌ 29ರ ವರೆಗೆ ಒಟ್ಟು34,63,973 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ62,550 ಮಂದಿ ಮೃತಪಟ್ಟಿದ್ದಾರೆ.

ADVERTISEMENT

26,48,999 ಮಂದಿ ಗುಣಮುಖರಾಗಿದ್ದು, 7,52,424 ಪ್ರಕರಣಗಳು ಸಕ್ರಿಯವಾಗಿವೆ.

ವರ್ಷಾಂತ್ಯದವರೆಗೆವಿದೇಶಿಗರ ಪ್ರವೇಶನಿಷೇಧಿಸಿದ ಮಲೇಷ್ಯಾ
ಸೋಂಕು ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಮುಂದುವರಿಸಿರುವ ಮಲೇಷ್ಯಾ, 2020ರ ಅಂತ್ಯದ ವರೆಗೆ ವಿದೇಶಿ ಪ್ರವಾಸಿಗರಿಗೆ ನಿಷೇಧ ಹೇರಿದೆ.

ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮುಹ್ಯಿದ್ದೀನ್‌ ಯಾಸಿನ್‌, ಜಗತ್ತಿನಾದ್ಯಂತ ಕೋವಿಡ್‌–19 ಪ್ರಕರಣಗಳು ಏರುಗತಿಯಲ್ಲಿ ಸಾಗಿದೆ. ದೇಶದಲ್ಲಿ ಸೋಂಕು ಹರಡುವಿಕೆ ನಿಯಂತ್ರಣದಲ್ಲಿದ್ದರೂ ವಿರಳ ಪ್ರಕರಣಗಳು ವರದಿಯಾಗುತ್ತಿವೆ.

ಮಲೆಷ್ಯಾದಲ್ಲಿ ಇದುವರೆಗೆ ಒಟ್ಟು 9 ಸಾವಿರ ಸೋಂಕು ಪ್ರಕರಣಗಳು ವರದಿಯಾಗಿದ್ದು, 125 ಮಂದಿ ಮೃತಪಟ್ಟಿದ್ದಾರೆ.ಮುಹ್ಯಿದ್ದೀನ್‌, ಹೆಚ್ಚಿನ ವ್ಯವಹಾರಗಳು ಮತ್ತು ಶಾಲೆಗಳು ಆರಂಭವಾಗಿರುವುದರಿಂದ ನಿರ್ಬಂಧಗಳನ್ನು ವಿಸ್ತರಿಸುವುದರಿಂದ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಏರುತ್ತಿವೆ ಸೋಂಕು ಪ್ರಕರಣ
ದಕ್ಷಿಣ ಕೊರಿಯಾದಲ್ಲಿ ಸತತ 16ನೇ ದಿನವೂ ನೂರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಸೋಂಕಿತರ ಸಂಖ್ಯೆ ಇದೇ ರೀತಿಯಲ್ಲಿ ಏರಿಕೆಯಾದರೆ, ಹಾಸಿಗೆ ಕೊರತೆ ಉಂಟಾಗುವ ಆತಂಕ ಎದುರಾಗಿದೆ.

ದೇಶದಲ್ಲಿ ಇಂದು 308 ಪ್ರಕರಣಗಳು ವರದಿಯಾಗಿವೆ ಎಂದುಕೊರಿಯಾದ ಸೋಂಕು ನಿಯಂತ್ರಣ ಮತ್ತು ಸುರಕ್ಷತಾ ಕೇಂದ್ರವು ಮಾಹಿತಿ ನೀಡಿದೆ. ಇದರಲ್ಲಿ ಹೆಚ್ಚು ಪ್ರಕರಣಗಳು ರಾಜಧಾನಿ ಸಿಯೊಲ್‌ನಲ್ಲಿಯೇ ದೃಢಪಟ್ಟಿವೆ ಎಂದು ವರದಿಯಾಗಿವೆ.

ಅಮೆರಿಕದಲ್ಲಿವ್ಯಕ್ತಿಗೆ ಮತ್ತೆ ಸೋಂಕು
ಈಗಾಗಲೇ ಸೋಂಕು ಕಾಣಿಸಿಕೊಂಡು ಗುಣಮುಖನಾಗಿದ್ದ ವ್ಯಕ್ತಿಯೊಬ್ಬರಿಗೆ ಮತ್ತೊಮ್ಮೆ ಸೋಂಕು ದೃಢಪಟ್ಟಿರುವುದು ಅಮೆರಿಕದನವೆಡಾದ ರಾಜ್ಯದ ವರದಿಯಾಗಿದೆ. ಹಾಂಗ್‌ಕಾಂಗ್‌ ಮತ್ತು ಯುರೋಪಿನ ದೇಶಗಳಲ್ಲಿ ಇಂತಹ ಪ್ರಕರಣಗಳು ವರದಿಯಾದ ಬಳಿಕ ಅಮೆರಿಕದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

25 ವರ್ಷದ ರೆನೊ ಎಂಬಾತನಿಗೆ ಏಪ್ರಿಲ್‌ನಲ್ಲಿ ಸೋಂಕು ತಗುಲಿತ್ತು. ಬಳಿಕ ಚೇತರಿಸಿಕೊಂಡಿದ್ದರಾದರೂ, ಜೂನ್‌ನಲ್ಲಿ ಮತ್ತೊಮ್ಮೆ ಸೋಂಕು ದೃಢಪಟ್ಟಿತ್ತು. ಆದರೆ, ಸುದ್ದಿಯಾಗಿರಲಿಲ್ಲ ಎನ್ನಲಾಗಿದೆ.

ಅತಿಹೆಚ್ಚು ಸೋಂಕು ಪ್ರಕಣಗಳು ವರದಿಯಾಗಿರುವಅಮೆರಿಕದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಇಲ್ಲಿಒಟ್ಟು59,18,832 ಪ್ರಕರಣಗಳು ವರದಿಯಾಗಿವೆ. 1,81,798 ಸೋಂಕಿತರು ಮೃತಪಟ್ಟಿದ್ದು, 21,18,367 ಮಂದಿ ಗುಣಮುಖರಾಗಿದ್ದಾರೆ.

ಬ್ರೆಜಿಲ್‌ನಲ್ಲಿ‌38,04,803 ಪ್ರಕರಣಗಳು ವರದಿಯಾಗಿವೆ. 1,19,504 ಮಂದಿ ಮೃತಪಟ್ಟಿದ್ದಾರೆ.

ರಷ್ಯಾದಲ್ಲಿ9,82,573, ಪೆರುವಿನಲ್ಲಿ6,29,961, ದಕ್ಷಿಣ ಆಫ್ರಿಕಾದಲ್ಲಿ6,20,132 ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.