ADVERTISEMENT

Covid-19 World Update: 2.3 ಕೋಟಿ ಗಡಿ ದಾಟಿದ ಸೋಂಕಿತರ ಸಂಖ್ಯೆ

ಏಜೆನ್ಸೀಸ್
Published 25 ಆಗಸ್ಟ್ 2020, 1:23 IST
Last Updated 25 ಆಗಸ್ಟ್ 2020, 1:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌: ಜಗತ್ತಿನಾದ್ಯಂತ ಕೋವಿಡ್–19 ಸೋಂಕಿತರ ಸಂಖ್ಯೆ 2.3 ಕೋಟಿ ತಲುಪಿದ್ದು,1.6 ಕೋಟಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್‌ ರಿಸೋರ್ಸ್‌ ಸೆಂಟರ್ ಮಾಹಿತಿ ನೀಡಿದೆ.

ಅತಿ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಇದುವರೆಗೆ 57,38,056 ಪ್ರಕರಣಗಳು ವರದಿಯಾಗಿದ್ದು, 1,77,229 ಮಂದಿ ಮೃತಪಟ್ಟಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ ಇದುವರೆಗೆ ಒಟ್ಟು 36,22,861 ಸೋಂಕು ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 1,15,309 ಮಂದಿ ಸಾವಿಗೀಡಾಗಿದ್ದಾರೆ.

ADVERTISEMENT

ವಿವಿಯ ಮಾಹಿತಿ ಪ್ರಕಾರ ಬ್ರೆಜಿಲ್‌ ನಂತರದ ಸ್ಥಾನದಲ್ಲಿ ಭಾರತ ಇದೆ. ಭಾರತದಲ್ಲಿ ಇದುವರೆಗೆ ಒಟ್ಟು 31,64,881 ಪ್ರಕರಣಗಳು ವರದಿಯಾಗಿವೆ. 58,546 ಮಂದಿ ಮೃತಪಟ್ಟಿದ್ದಾರೆ.

ಜಗತ್ತಿನಾದ್ಯಂತ ಇದುವರೆಗೆ ಒಟ್ಟು 2,35,61,478 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 8,11,298 ಮಂದಿ ಮೃತಪಟ್ಟಿದ್ದಾರೆ. ಹಾಗೂ 1,63,47,923 ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಇತ್ತ ಪಾಕಿಸ್ತಾನದಲ್ಲಿ 2,93,261 ಪ್ರಕರಣಗಳು ವರದಿಯಾಗಿದ್ದು, 6,244 ಮಂದಿ ಸಾವಿಗೀಡಾಗಿದ್ದಾರೆ. ಬಾಂಗ್ಲಾದೇಶದಲ್ಲಿ 2,97,083 ಪ್ರಕರಣಗಳಿದ್ದು, ಇದುವರೆಗೆ3,983 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.