ವಾಷಿಂಗ್ಟನ್: ಜಗತ್ತಿನಾದ್ಯಂತ 3.42 ಕೋಟಿಗೂ ಅಧಿಕ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 10 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಕೊರೊನಾ ವೈರಸ್ ವರ್ಡೊ ಮೀಟರ್ ತಿಳಿಸಿದೆ.
ಈವರೆಗೆ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 3,42,55,455ಕ್ಕೆ ಮುಟ್ಟಿದ್ದು, 10,20,280 ಮಂದಿ ಮೃತಪಟ್ಟಿದ್ದಾರೆ. 2,54,95,041 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 77,40,134 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.
ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ 74,60,357 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಸದ್ಯ 2,12,047 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 47,12,013 ಜನರು ಈ ವರೆಗೆ ಚೇತರಿಸಿಕೊಂಡಿದ್ದಾರೆ.
ಭಾರತದಲ್ಲಿ 63,23,247, ಬ್ರೆಜಿಲ್‌ನಲ್ಲಿ 48,13,586, ರಷ್ಯಾದಲ್ಲಿ 11,85,231, ದಕ್ಷಿಣ ಆಫ್ರಿಕಾದಲ್ಲಿ 6,74,339, ಕೊಲಂಬಿಯಾದಲ್ಲಿ 8,29,679, ಪೆರುವಿನಲ್ಲಿ 8,14,829, ಚಿಲಿಯಲ್ಲಿ 4,62,991, ಇರಾನ್‌ನಲ್ಲಿ 4,61,044, ಇಂಗ್ಲೆಂಡ್‌ನಲ್ಲಿ 4,60,178 ಮತ್ತು ಸ್ಪೇನ್‌ನಲ್ಲಿ 7,69,188 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.