ADVERTISEMENT

ಅಮೆರಿಕ: 'ದುರ್ಬಲ'ರನ್ನು ಬಾಧಿಸದ ಕೊರೊನಾ

ಪಿಟಿಐ
Published 17 ಆಗಸ್ಟ್ 2020, 7:42 IST
Last Updated 17 ಆಗಸ್ಟ್ 2020, 7:42 IST
ಅಮೆರಿಕದ ಟೆಕ್ಸಾಸ್ ನಗರದಲ್ಲಿ ಸೋಂಕಿತರಿಗೆ ಚಿಕಿತ್ಸೆ
ಅಮೆರಿಕದ ಟೆಕ್ಸಾಸ್ ನಗರದಲ್ಲಿ ಸೋಂಕಿತರಿಗೆ ಚಿಕಿತ್ಸೆ   

ಸ್ಯಾನ್‌ಫ್ರಾನ್ಸಿಸ್ಕೊ: ಅಮೆರಿಕದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದರೂ, ಇಲ್ಲಿನ ನಿರಾಶ್ರಿತರು, ಬೀದಿ ಬದಿ ವಾಸಿಸುವವರು, ತಾತ್ಕಾಲಿಕ ಟೆಂಟ್‌ಗಳಲ್ಲಿರುವಂತಹವರು ಹೆಚ್ಚಾಗಿ ಕೋವಿಡ್‌ ಸಾವಿಗೆ ಒಳಗಾಗಿಲ್ಲ.

ಅಮೆರಿಕದಲ್ಲಿ ಕೊರೊನಾ ಸೋಂಕು ಬಾಧಿಸಲು ಆರಂಭಿಸಿದಾಗ, ಅಲ್ಲಿನ ಆರೋಗ್ಯ ಅಧಿಕಾರಿಗಳು, ನಿರಾಶ್ರಿತರ ಪರ ಹೋರಾಟಗಾರರು, ಇಂಥ ದುರ್ಬಲ ವರ್ಗದವರಿಗೆ, ವಸತಿ ರಹಿತರಿಗೆ, ತೀವ್ರ ಅನಾರೋಗ್ಯ ಪೀಡಿತರು ಸೋಂಕಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಬಹುದು. ಸಾವು–ನೋವು ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ಕಾರಣಕ್ಕಾಗಿಯೇ, ಸೋಂಕು ವ್ಯಾಪಿಸುವ ಸೂಚನೆ ಕಂಡಾಗ, ತಕ್ಷಣ ಇಂಥ ವರ್ಗದ ಜನರನ್ನೆಲ್ಲ ನಿಗದಿತ ಕೋವಿಡ್ ಆರೈಕೆ ಕೇಂದ್ರಗಳಿಗೆ, ಹೋಟೆಲ್‌ಗಳಿಗೆ ಸ್ಥಳಾಂತರಿಸಲಾಗಿತ್ತು.

ಅಧಿಕಾರಿಗಳು, ಆರೋಗ್ಯ ಸಂಶೋಧಕರ ನಿರೀಕ್ಷೆಯಂತೆ ಇಂಥ ನಿರಾಶ್ರಿತರ ತಾಣಗಳಲ್ಲಿ, ಟೆಂಟ್‌ ವಾಸಿಗಳಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿತು. ಆದರೆ, ಆತಂಕ ಪಟ್ಟಂತೆ ಸಾವು–ನೋವುಗಳು ಸಂಭವಿಸಲಿಲ್ಲ ಎಂದು ಕೊರೊನಾ ವೈರಸ್ ಸೋಂಕು ಕುರಿತು ನೀತಿ ನಿರೂಪಕ ಉಸ್ತುವಾರಿ ಡಾ. ಡೆಬೊರಾ ಬೋರ್ನ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.