ADVERTISEMENT

ಕೊರೊನಾ ವೈರಸ್‌ | ಚೀನಾ ಹಿಂದಿಕ್ಕಿದ ಇಟಲಿ, ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆ 

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 5:38 IST
Last Updated 21 ಮಾರ್ಚ್ 2020, 5:38 IST
ಇಟಲಿಯಲ್ಲಿ ಸಾಮೂಹಿಕ ಸೋಂಕು ನಿರೋಧಕ ಕಾರ್ಯಾಚರಣೆ ಆರಂಭಿಸಿದ ಯೋಧರು.
ಇಟಲಿಯಲ್ಲಿ ಸಾಮೂಹಿಕ ಸೋಂಕು ನಿರೋಧಕ ಕಾರ್ಯಾಚರಣೆ ಆರಂಭಿಸಿದ ಯೋಧರು.   

ರೋಮ್‌: ಇಟಲಿಯಲ್ಲಿ ಕೊರೊನಾ ಸೋಂಕಿಗೆ (ಕೋವಿಡ್‌–19)ಬಲಿಯಾದವರ ಸಂಖ್ಯೆ ಶನಿವಾರ 4,032ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ ಚೀನಾಕ್ಕಿಂತಲೂ ಹೆಚ್ಚಾಗಿದೆ.

ಇಟಲಿಯಲ್ಲಿ ಶುಕ್ರವಾರ ಒಂದೇ ದಿನ 627 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಬುಧವಾರವೂ ಒಂದೇ ದಿನ 475 ಮಂದಿ ಬಲಿಯಾಗಿದ್ದು, ಕೊರೊನಾ ಭೀಕರತೆ ಮೆರೆದಿತ್ತು.

ಚೀನಾದಲ್ಲಿ ಈವರೆಗೆ 3,249 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.