ADVERTISEMENT

Covid-19 World Update: 3.4 ಲಕ್ಷದ ಸನಿಹ ತಲುಪಿದ ಸಾವಿನ ಸಂಖ್ಯೆ

ಚೀನಾದಲ್ಲಿ ಹೊಸ ಪ್ರಕರಣ ಇಲ್ಲ

ಏಜೆನ್ಸೀಸ್
Published 23 ಮೇ 2020, 16:49 IST
Last Updated 23 ಮೇ 2020, 16:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಕೊರೊನಾ ವೈರಸ್‌ ಸೋಂಕಿಗೀಡಾಗುತ್ತಿರುವವರ ಮತ್ತು ಸಾವಿಗೀಡಾಗುತ್ತಿರುವವರ ಸಂಖ್ಯೆ ಅಮೆರಿಕದಲ್ಲಿ ದಿನೇದಿನೇ ಹೆಚ್ಚಾಗುತ್ತಿದೆ. ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ ಶನಿವಾರ ರಾತ್ರಿ 96,125 ತಲುಪಿದೆ. ಒಟ್ಟಾರೆಯಾಗಿ 16.04 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.

ಜಾನ್ಸ್‌ ಹಾಪ್‌ಕಿನ್ಸ್ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ, ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 52.52 ಲಕ್ಷ ದಾಟಿದೆ. ಈವರೆಗೆ 339,026 ಜನ ಮೃತಪಟ್ಟಿದ್ದಾರೆ.

ಈವರೆಗೆ ರಷ್ಯಾದಲ್ಲಿ 3.35 ಲಕ್ಷ, ಬ್ರೆಜಿಲ್‌ನಲ್ಲಿ 3.30 ಲಕ್ಷ ಹಾಗೂ ಬ್ರಿಟನ್‌ನಲ್ಲಿ 2.55 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಈ ದೇಶಗಳಲ್ಲಿ ಕ್ರಮವಾಗಿ 3,388 ಹಾಗೂ21,048 ಮತ್ತು 36,475 ಜನ ಸಾವಿಗೀಡಾಗಿದ್ದಾರೆ.

ADVERTISEMENT

ಸ್ಪೇನ್‌ನಲ್ಲಿ28,628, ಇಟಲಿಯಲ್ಲಿ 32,616 ಹಾಗೂ ಫ್ರಾನ್ಸ್‌ನಲ್ಲಿ ಈವರೆಗೆ 28,218 ಜನ ಮೃತಪಟ್ಟಿದ್ದಾರೆ.

ಚೀನಾದಲ್ಲಿ ಹೊಸ ಪ್ರಕರಣ ಇಲ್ಲ: ಕೊರೊನಾ ವೈರಸ್ ಮೊದಲು ಕಂಡುಬಂದಿದ್ದ ಚೀನಾದಲ್ಲಿ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ ಒಂದೂ ಹೊಸ ಪ್ರಕರಣ ದಾಖಲಾಗಿಲ್ಲ ಎಂದು ಅಲ್‌ ಜಜೀರಾ ಜಾಲತಾಣ ವರದಿ ಮಾಡಿದೆ. ಚೀನಾದಲ್ಲಿ ಈವರೆಗೆ 84,081 ಜನರಿಗೆ ಸೋಂಕು ತಗುಲಿದ್ದು, 4,638 ಜನ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.