ADVERTISEMENT

Covid-19 World Update| ಅಮೆರಿಕದಲ್ಲಿ 25 ಲಕ್ಷದ ಸನಿಹಕ್ಕೆ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 17:37 IST
Last Updated 26 ಜೂನ್ 2020, 17:37 IST
ಅಮೆರಿಕದಲ್ಲಿ ಮಾಸ್ಕ್‌ಧಾರಿಯೊಬ್ಬರು ಚಿತ್ರಾಕೃತಿಯ ಎದುರು ನಡೆದು ಹೋದಾಗ ಕಂಡ ದೃಶ್ಯ / ಎಎಫ್‌ಪಿ ಚಿತ್ರ
ಅಮೆರಿಕದಲ್ಲಿ ಮಾಸ್ಕ್‌ಧಾರಿಯೊಬ್ಬರು ಚಿತ್ರಾಕೃತಿಯ ಎದುರು ನಡೆದು ಹೋದಾಗ ಕಂಡ ದೃಶ್ಯ / ಎಎಫ್‌ಪಿ ಚಿತ್ರ    

ಚೀನಾದ ವುಹಾನ್‌ ಮೂಲಕ ವಿಶ್ವದ 196ಕ್ಕೂ ಅಧಿಕ ರಾಷ್ಟ್ರಗಳಿಗೆ ವ್ಯಾಪಿಸಿರುವ ಕೋವಿಡ್‌ 19 ಸದ್ಯ ಜಗತ್ತಿನ 96,65,041 ಮಂದಿಯನ್ನು ಭಾದಿಸುತ್ತಿದೆ. ಈ ಪೈಕಿ 47 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ.

ಇನ್ನು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಗುರುವಾರ ರಾತ್ರಿಯ ಹೊತ್ತಿಗೆ 490,903ಕ್ಕೆ ಏರಿದ್ದು, ಅದು ಐದು ಲಕ್ಷ ಸಮೀಪಿಸಿದೆ.
ಅತಿ ಹೆಚ್ಚು ಸೋಂಕಿತರನನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಶುಕ್ರವಾರ 24,29,769ಕ್ಕೆ ಏರಿಕೆಯಾಗಿದೆ. ಅಲ್ಲದೆ, ಅಲ್ಲಿ ಸಾವಿನ ಸಂಖ್ಯೆ 1,24,544ಕ್ಕೆ ಏರಿದೆ.

ಬ್ರೆಜಿಲ್‌ನಲ್ಲಿ ಎಲ್ಲ ರಾಷ್ಟ್ರಗಳಿಗಿಂತಲೂ ಅತಿ ವೇಗವಾಗಿ ಸೋಂಕು ಹರಡುತ್ತಿದೆ. ಅಲ್ಲಿ 12,28,114 ಮಂದಿಗೆ ಸೋಂಕು ತಗುಲಿದ್ದರೆ, 54,971 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಇನ್ನುಳಿದಂತೆ ಬ್ರಿಟನ್‌ನಲ್ಲಿ ಸೋಂಕಿನಿಂದ 43,230 ಮಂದಿ, ಇಟಲಿಯಲ್ಲಿ 34,678 ಮತ್ತು ಫ್ರಾನ್ಸ್‌ನಲ್ಲಿ 29,752 ಮಂದಿ ಕೊನೆಯುಸಿರೆಳೆದಿದ್ದಾರೆ.

ಇನ್ನೊಂದೆಡೆ, ರಷ್ಯಾ ಸೋಂಕಿತರ ಸಂಖ್ಯೆ 6 ಲಕ್ಷ ದಾಟಿದೆ. ಅಲ್ಲಿ 6,19,936 ಸೋಂಕಿತರಿದ್ದರೆ, 8,770ಮಂದಿ ಸಾವಿಗೀಡಾಗಿದ್ದಾರೆ. ಸೋಂಕಿತರ ಸಂಖ್ಯೆಗೆ ಪ್ರತಿಯಾಗಿ ಸಂಭವಿಸಿರುವ ಸಾವುಗಳ ಸಂಖ್ಯೆಯಲ್ಲಿ ರಷ್ಯಾವನ್ನು ಇತರ ದೇಶಗಳಿಗೆ ಹೋಲಿಸಿದರೆ, ಅಲ್ಲಿ ಗಣನೀಯವಾಗಿ ಕಡಿಮೆ ಇದೆ.

ಭಾರತದಲ್ಲಿ 490,401 ಏರಿಕೆಯಾಗಿದ್ದು, 5 ಲಕ್ಷದ ಕಡೆಗೆ ಅತಿ ವೇಗವಾಗಿ ಮುಖ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.